ರಾಷ್ಟ್ರೀಯ

ಕಳೆದ ಮೂರು ದಿನಗಳ ಹಿಂದೆ ಮೋದಿ ಉದ್ಘಾಟಿಸಿದ್ದ ಅಸ್ಸಾನ ಬೋಗಿಬೆಲ್ ಬ್ರಿಡ್ಜ್’ನಲ್ಲಿ ಅಪಘಾತ; ಬಾಲಕ ಸಾವು, ವಿಡಿಯೋ ವೈರಲ್!

Pinterest LinkedIn Tumblr

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ದಿನಗಳ ಹಿಂದೆ ಅಸ್ಸಾನ ಬೋಗಿಬೆಲ್ ಬ್ರಿಡ್ಜ್ ಅನ್ನು ಉದ್ಘಾಟಿಸಿದ್ದು ಇದರ ಬೆನ್ನಲ್ಲೇ ಬ್ರಿಡ್ಜ್ ಮೇಲೆ ಸಂಭವಿಸಿದ ಮೊದಲ ಅಪಘಾತದಲ್ಲಿ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.

https://youtu.be/DQtTKgLJ6j4

ಹೊಸದಾಗಿ ಉದ್ಘಾಟನೆಗೊಂಡಿದ್ದರಿಂದ ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ತುಂಬಾ ಜನ ನಿಂತಿದ್ದರು. ಈ ವೇಳೆ ಟಾಟಾ ಸುಮ ವಾಹನದಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಸೇತುವೆ ಮೇಲಿನ ತನ್ನ ಮೊದಲ ಪ್ರಯಾಣವನ್ನು ಮೊಬೈಲ್ ನಲ್ಲಿ ಶೂಟ್ ಮಾಡುತ್ತಿದ್ದರು.

ಈ ವೇಳೆ ನಿಂತಿದ್ದ ಕಾರಿನ ಮುಂಭಾಗದಿಂದ ಬಾಲಕನೊಬ್ಬ ರಸ್ತೆಯ ಬಲಬದಿಗೆ ಓಡಿ ಬಂದಿದ್ದಾನೆ. ಕಾರು ಅಡ್ಡ ಇದ್ದಿದ್ದರಿಂದ ಚಾಲನಿಗೆ ಬಾಲಕ ದಿಢೀರ್ ಅಂತ ಬಂದಿದ್ದು ಕಾಣಿಸಲಿಲ್ಲ. ಪರಿಣಾಮ ಬಾಲಕನಿಗೆ ಕಾರು ಗುದ್ದಿದ್ದು ಆತ ಅಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

Comments are closed.