ರಾಷ್ಟ್ರೀಯ

ಫುಡ್ ಗೆ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ ! ಪಾರ್ಸೆಲ್‌ ಬಿಚ್ಚಿ ತಿಂದ ಜೋಮ್ಯಾಟೋ ಡೆಲಿವೆರಿ ಬಾಯ್ ವೀಡಿಯೊ ವೈರಲ್

Pinterest LinkedIn Tumblr

ಮನೆಯಲ್ಲಿ ಅಡುಗೆ ಮಾಡದೇ ಮೊಬೈಲ್ ಆ್ಯಪ್ ಮೂಲಕ ಫುಡ್ ಗೆ ಆರ್ಡರ್ ಮಾಡುವ ಗ್ರಾಹಕರೇ ಎಚ್ಚರ. ಫುಡ್ ಡೆಲಿವರಿ ಸೇವೆ ಸಲ್ಲಿಸುವ ಜೋಮ್ಯಾಟೋದ ಡೆಲಿವೆರಿ ಬಾಯ್ ಪಾರ್ಸೆಲ್ ಬಿಚ್ಚಿ ತಿಂದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

https://youtu.be/UaDyQF1xWyY

ಜೋಮ್ಯಾಟೋದ ಡೆಲಿವೆರಿ ಬಾಯ್ ರಸ್ತೆ ಬದಿ ತಮ್ಮ ಬೈಕ್ ಅನ್ನು ನಿಲ್ಲಿಸಿ ಡೆಲಿವರಿ ಮಾಡಲು ತಂಡಿದ್ದ ಆಹಾರದ ಪೊಟ್ಟಣವನ್ನು ಬಿಚ್ಚಿ ಅದರಲ್ಲಿದ್ದ ಆಹಾರವನ್ನು ಸ್ವಲ್ಪ ಸ್ವಲ್ಪ ಸೇವಿಸಿ ಮತ್ತೆ ಪೊಟ್ಟಣವನ್ನು ಮುಚ್ಚಿಟ್ಟಿದ್ದಾನೆ. ಇದನ್ನು ಯಾರೋ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಜೋಮ್ಯಾಟೋ ಈ ಕುರಿತು ಟ್ವೀಟ್ ಮಾಡಿ ಗ್ರಾಹಕರ ಆತ್ಮತೃಪ್ತಿಗೆ ನಮ್ಮ ಆದ್ಯತೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಇನ್ನು ಮುಂದೆ ಈ ರೀತಿ ನಡೆಯದಂತೆ ಎಚ್ಚರವಹಿಸುವುದಾಗಿ ಟ್ವೀಟಿಸಿದ್ದಾರೆ.

ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಗುರ್ಗಾಮ್/ನೋಯ್ಡಾ ಮತ್ತು ಪುಣೆಯಲ್ಲಿ ಜೋಮ್ಯಾಟೋ ಫುಡ್ ಡೆಲಿವರಿ ಮಾಡುತ್ತಿದೆ.

Comments are closed.