ಮನೋರಂಜನೆ

ಸಖತ್ ಸ್ಟೆಪ್ಸ್ ಹಾಕಿದ ಮುಖೇಶ್ -ನೀತಾ ಅಂಬಾನಿ ದಂಪತಿ !

Pinterest LinkedIn Tumblr

ಉದಯ್‍ಪುರ: ಖ್ಯಾತ ಉದ್ಯಮಿ ರಿಲಯನ್ಸ್​ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಮಗಳಾದ ಇಶಾ ಅಂಬಾಯಿ ವಿವಾಹ ಪೂರ್ವ ಕಾರ್ಯಕ್ರಮವು ಶನಿವಾರ ಅದ್ಧೂರಿಯಾಗಿ ನಡೆಯಿತು.

ಸರೋವರಗಳ ನಗರಿ ಉದಯ್‍ಪುರದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ರಿಲಯನ್ಸ್​ ಫೌಂಡೇಷನ್ ಮುಖ್ಯಸ್ಥೆ ನೀತಾ ಅಂಬಾನಿ ನೃತ್ಯ ಮಾಡಿ ಸಂಭ್ರಮಿಸಿದರು.

https://www.instagram.com/p/BrJD2i3lz_0/?utm_source=ig_embed&utm_campaign=embed_video_watch_again

ಈ ಸಂಭ್ರಮದಲ್ಲಿ ಬಾಲಿವುಡ್‍ನ ಖ್ಯಾತ ನಟರುಗಳಾದ ಶಾರುಖ್ ಖಾನ್, ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಅನೇಕ ನಟ- ನಟಿಯರು ಹಾಗೂ ಸಿನಿಮಾ ರಂಗದ ಗಣ್ಯರು ಭಾಗಿಯಾಗಿದ್ದರು.

https://www.instagram.com/p/BrJlKTklNA9/?utm_source=ig_embed&utm_campaign=embed_video_watch_again

ಅಲ್ಲದೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಪತಿ ನಿಕ್ ಜೋನ್ಸ್ ಕೂಡ ಭಾಗವಹಿಸಿದ್ದರು. ಬಚ್ಚನ್ ಕುಟುಂಬದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಸಂಭ್ರಮದಲ್ಲಿ ಪಾಲ್ಗೊಂಡರೇ, ಕ್ರಿಕೆಟರ್ ಸಚಿನ್ ತೆಂಡುಲ್ಕರ್, ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಸೇರಿದಂತೆ ಹಲವು ಮಂದಿ ಇಶಾ ಅಂಬಾನಿಯ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

https://www.instagram.com/p/BrJn8pfAo8X/?utm_source=ig_embed&utm_campaign=embed_video_watch_again

ಈ ಅದ್ಧೂರಿ ಸಂಭ್ರಮದಲ್ಲಿ ವಧು-ವರರು ಜೊತೆಗೂಡಿ ಹೆಜ್ಜೆ ಹಾಕುವ ಮೂಲಕ ಖುಷಿ ಹಂಚಿಕೊಂಡರು. ಇಶಾ ಅಂಬಾನಿ ಹಾಗೂ ಆನಂದ್ `ಕಬಿ ಅಲ್ವಿದಾ ನಾ ಕೆಹೆನಾ’ ಚಿತ್ರದ `ಮಿಥುವಾ’ ಹಾಡಿಗೆ ಸಖತ್ ರೋಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದರು.

ಅಂಬಾನಿ ಮಕ್ಕಳಾದ ಅನಂತ್ ಹಾಗೂ ಆಕಾಶ್ ತಮ್ಮ ಸಹೋದರಿಯೊಂದಿಗೆ ಸಿಂಪಲ್ ಸ್ಟೆಪ್ಸ್​ ಹಾಕಿ ಮಿಂಚಿದರು. ಇನ್ನು ಮುಖೇಶ್ ಅಂಬಾನಿ ಹಾಗೂ ನೀತಾ ಅವರ ಡ್ಯಾನ್ಸ್​ಗೆ ಅತಿಥಿಗಳು ಫಿದಾ ಆದರು.

ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿಗಳ ಹಾರಿಸುವ ಮೂಲಕ ಮೆರುಗು ಹೆಚ್ಚಿಸಿದ ಕಿಂಗ್​ ಖಾನ್ ಪತ್ನಿ ಗೌರಿಯೊಂದಿಗೆ ಕೆಲ ಹಾಡುಗಳಿಗೆ ಕುಣಿದು ಮನರಂಜಿಸಿದರು. ಇದರ ಬಳಿಕ ವೇದಿಕೆಯೇರಿದ ಐಶ್ವರ್ಯ ಅಭಿಷೇಕ್ ಜೋಡಿ ಸಹ ಹೆಜ್ಜೆ ಹಾಕಿ ಅತಿಥಿಗಳನ್ನು ಸಂಭ್ರಮವನ್ನು ಹಂಚಿಕೊಂಡರು.

Comments are closed.