ಕರ್ನಾಟಕ

‘ಮಾವ, ಮಾವ’ ಹಾಡಿಗೆ ಮುದ್ದಿನ ಮಡದಿ ಜೊತೆ ಮಂಡ್ಯದ ಗಂಡಿನ ಕೊನೆಯ ಸ್ಟೆಪ್ (Video)

Pinterest LinkedIn Tumblr

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಪತ್ನಿ, ನಟಿ ಸುಮಲತಾ ಅವರ ಜೊತೆ ಮನೆಯಲ್ಲಿ ತೆಲುಗು ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂಬರೀಶ್ ಅವರು ತಮ್ಮ ಮನೆಯಲ್ಲಿ ಸುಮಲತಾ ಅವರ ಜೊತೆ ತೆಲುಗು ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಚಿರಂಜೀವಿ ಹಾಗೂ ರೋಜ ಅಭಿನಯಿಸಿರುವ ‘ಬಿಗ್ ಬಾಸ್’ ಚಿತ್ರದ ಮಾವ ಮಾವ ಹಾಡಿಗೆ ಅಂಬಿ- ಸುಮಲತಾ ಹೆಜ್ಜೆ ಹಾಕಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

ಅಂಬರೀಶ್ ಹಾಗೂ ಸುಮಲತಾ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದನ್ನು ಅವರ ಅಭಿಮಾನಿಗಳು ನೋಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅಂಬಿ ತಮ್ಮ ಪತ್ನಿ ಸುಮಲತಾ ಅವರ ಜೊತೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಸದ್ಯ ಅಂಬಿ ಹಾಗೂ ಸುಮಲತಾ ಅವರ ಈ ಡ್ಯಾನ್ಸ್ ವಿಡಿಯೋ ಎಲ್ಲರ ವಾಟ್ಸಪ್ ಸ್ಟೇಟಸ್ ಆಗಿದೆ. ಕೆಲವರು ತಮ್ಮ ನೆಚ್ಚಿನ ನಾಯಕ ಅಂಬಿ ಅವರ ಡ್ಯಾನ್ಸ್ ನೋಡಿ ಖುಷಿಪಟ್ಟರೆ, ಕೆಲವರು ಅಂಬಿಯನ್ನು ನೆನೆದು ಭಾವುಕರಾಗಿದ್ದಾರೆ.

Comments are closed.