ಕರಾವಳಿ

ಅರ್ಜುನ್ ವ್ಯಕ್ತಿತ್ವ ಎಲ್ಲರಿಗೂ ಗೊತ್ತು: ಸರ್ಜಾ ಪರ ನಿಂತ ನಟಿ ತಾರಾ (ವಿಡಿಯೋ)

Pinterest LinkedIn Tumblr

ಕುಂದಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ. ನಮ್ಮ ದೇಶದಲ್ಲಿ ಹೆಣ್ಣು ಶೋಷಣೆ, ದೌರ್ಜನ್ಯಕ್ಕೊಳಗಾದರೆ ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಮಿ ಟೂ ಅಭಿಯಾನ ತಪ್ಪು ಎಂದು ನಾನು ಹೇಳುತ್ತಿಲ್ಲ. ಮಿ ಟೂ ಅಭಿಯಾನದಿಂದಲೇ ಹೆಣ್ಣು ಮಕ್ಕಳಿಗೆ ವೇದಿಕೆ ಸಿಕ್ಕಿದೆ ಎನ್ನುವುದಾದರೆ ಅದನ್ನೂ ನಾನು ಒಪ್ಪಿಕೊಳ್ಳುತ್ತೇನೆ ಎಂದು ನಟಿ ತಾರಾ ಹೇಳಿದರು

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ಪರ ಬೈಂದೂರಿನಲ್ಲಿ ಪ್ರಚಾರಕ್ಕೆ ಬಂದ ವೇಳೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ನಟಿ ಶೃತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ಪ್ರಕರಣದಲ್ಲಿ ಚಿತ್ರರಂಗದ ಹಿರಿಯರೆಲ್ಲರೂ ಕೂತು ಚರ್ಚೆ ನಡೆಸಿದ್ದಾರೆ. ಈ ಪ್ರಕರಣ ನ್ಯಾಯಯುತವಾಗಿ ಸುಖಾಂತ್ಯ ಕಾಣುತ್ತದೆ ಎನ್ನುವ ಭರವಸೆ ಇದೆ ಎಂದರು.

ಅರ್ಜುನ್ ಸರ್ಜಾ ಅವರೊಂದಿಗೆ ನಾನು ಸಿನೆಮಾ ಮಾಡದೆ 22 ವರ್ಷಗಳು ಕಳೆದಿವೆ. ಅವರು ಮತ್ತು ಅವರ ಇಡೀ ಕುಟುಂಬವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ನನ್ನ ಮನೆ ಸಮೀಪದಲ್ಲೇ ಅವರ ಮನೆ ಇದೆ. ಎಲ್ಲಾ ಕಾರ್ಯಕ್ರಮಗಳಿಗೂ ನಾವೆಲ್ಲರೂ ಜೊತೆಯಾಗುತ್ತೇವೆ. ಅರ್ಜುನ್ ಸರ್ಜಾ ಅವರ ಮೇಲಿನ ಆರೋಪ ಕೇಳಿ ನನಗೆ ಶಾಕ್ ಆಯಿತು. ಇಲ್ಲಿ ಯಾರದು ತಪ್ಪು ಯಾರದ್ದು ಸರಿ ಎಂದು ನಾನು ಹೇಳುತ್ತಿಲ್ಲ. ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇದೆ. ಬೆರಳೆಣಿಕೆಯಷ್ಟು ಕಲಾವಿದೆಯರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಹೆಣ್ಣು ಮಗಳಿಗೂ ಅನ್ಯಾಯವಾಗಬಾರದು ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.