ಕರಾವಳಿ

ಬುದ್ದಿಜೀವಿಗಳ ವಿರುದ್ಧ ಕಿಡಿ ಕಾರಿದ ಡಾ. ಸಂತೋಷ ಗುರೂಜಿ ಹೇಳಿದ್ದೇನು ಗೊತ್ತಾ? (ವೀಡಿಯೊ)

Pinterest LinkedIn Tumblr

ಉಡುಪಿ: ಬಾರಕೂರು ಮಹಾಸಂಸ್ಥಾನದ ಶ್ರೀ ವಿಶ್ವಸಂತೋಷ ಭಾರತೀ ಶ್ರೀಗಳು ಬುದ್ದಿಜೀವಿಗಳ ವಿರುದ್ಧ ಕಿಡಿಕಾರಿದ್ದಾರೆ. ಮಸ್ತಕಾಭಿಷೇಕ ಬಗ್ಗೆ ಬುದ್ದಿ ಜೀವಿಗಳು ಮಾತನಾಡಲ್ಲ, ಅಲ್ಲಿ ಹಾಲು ಪೋಲಾಗಿರುವ ಬಗ್ಗೆ ಮಾತನಾಡಲ್ಲ. ಯಾಕೇಂದ್ರೆ ಜೈನರು ತಿರುಗಿ ಬೀಳುವ ಭಯ ಅವರಲ್ಲಿದೆ.

ಹಿಂದೂಗಳ ಬಗ್ಗೆ ಮಾತ್ರ ಠೀಕೆ ಮಾಡುವ ಬುದ್ದಿಜೀವಿಗಳಿಗೆ ಹಿಂದೂಗಳ ಬಗ್ಗೆ ಮಾತಾಡುವುದು ಚಟವಾಗಿ ಹೋಗಿದೆ ಎಂದು ಆರೋಪಿಸಿದರು. ಹಿಂದುಗಳ ಬಗ್ಗೆ ಮಾತಾಡಿದ್ರೆ ಕೇಳೋರು ಇಲ್ಲವಾಗಿದೆ ಯಾಕೆಂದರೆ ನಮ್ಮಲ್ಲಿ ಹತ್ತಾರು ಜಾತಿಯಿದ್ದು ಒಮ್ಮನಸಿಲ್ಲ ಎಂದು ಗುರೂಜಿ ಬಾರ್ಕೂರಿನಲ್ಲಿ ಈ ಹೇಳಿಕೆ ನೀಡಿದ್ದಾರೆ.

ಬಳಿಕ ಮುಂದುವರೆದು ಮಾತನಾಡಿದ ಅವರು ಮಸ್ತಕಾಭಿಷೇಕ ಮಾಡುವುದು ಉತ್ತಮ ವಿಚಾರ. ಅಭಿಷೇಕದ ಮೂಕ ಜೈನ ಸಂಘಟನೆ ಆಗುತ್ತಿದೆ. ೧೨ ವರ್ಷ ಬಿಸಿಲು ಮಳೆಯಲ್ಲಿರುವ ಶಿಲೆಗೆ ಈ ಅಭಿಷೇಕ ಅಗತ್ಯವಾಗಿದೆ. ಯಾವುದಕ್ಕೆಲ್ಲಾ ಹಣ ಪೋಲಾಗುವ ಬದಲು ಇಂತಹ ಕಾರ್ಯಕ್ಕೆ ಹಣ ವಿನಿಯೋಗವಾಗಿದ್ದು ಉತ್ತಮವಾಗಿದ್ದು ಹಾಲಿನ ಮೂಲಕವಾದ್ರೂ ಬುದ್ದಿ ಜೀವಿಗಳಿಗೆ ಬುದ್ದಿ ಬರಲಿ ಎಂದರು.

Comments are closed.