ರಾಷ್ಟ್ರೀಯ

ಪ್ರಯಾಣಿಕನ ಮೇಲೆ ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಹಲ್ಲೆ: ವಿಡಿಯೊ ವೈರಲ್‌

Pinterest LinkedIn Tumblr

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್​ಲೈನ್ಸ್​ ಸಿಬ್ಬಂದಿ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಅಕ್ಟೋಬರ್​ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚೆನ್ನೈನಿಂದ ದೆಹಲಿಗೆ ಬಂದ ರಾಜೀವ್​ ಕಟಿಯಾಲ್‌ ಅವರ ಮೇಲೆ ಇಂಡಿಗೋ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.

‘ನಾನು ವಿಮಾನ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದೆ. ಇದೇ ವೇಳೆ ಇಂಡಿಗೋ ಸಿಬ್ಬಂದಿ ನನ್ನ ಕಡೆ ತಿರುಗಿ ಬಹಳ ಅಸಭ್ಯ ರೀತಿಯಲ್ಲಿ ಕೂಗುತ್ತಿದ್ದರು. ಅದನ್ನು ಪ್ರಶ್ನಿಸಿದೆ. ಜತೆಗೆ ಕೂಡಲೇ ಬಸ್‌ ವ್ಯವಸ್ಥೆ ಮಾಡಿ ಎಂದು ಕೇಳಿದೆ. ಇದೇ ವೇಳೆ ಒಂದು ಬಸ್‌ ಬಂತು. ಹತ್ತಲು ಮುಂದಾದ ನನ್ನನ್ನು ಹೊರಗೆಳೆದು ನನ್ನ ಮೇಲೆ ಹಲ್ಲೆ ನಡೆಸಿದರು’ ಎಂದು ರಾಜೀವ್​ ಕಟಿಯಾಲ್‌ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ಘಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರಿಂದ ಎಚ್ಚೆತ್ತ ಇಂಡಿಗೋ ಏರ್‌ಲೈನ್ಸ್‌ ಘಟನೆ ಕುರಿತು ಕ್ಷಮೆಯಾಚಿಸಿದೆ.

‘ಘಟನೆ ಕುರಿತು ನಾನು ವೈಯಕ್ತಿಕವಾಗಿ ಕ್ಷಮೆಯಾಸುತ್ತೇನೆ. ಇದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ. ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಇಬ್ಬರು ಸಿಬ್ಬಂದಿಯನ್ನು ಈಗಾಗಲೇ ಕೆಲಸದಿಂದ ಅಮಾನತು ಮಾಡಿರುವುದಾಗಿ ಇಂಡಿಗೋ ಏರ್‌ಲೈನ್ಸ್‌ ಅಧ್ಯಕ್ಷ ಆದಿತ್ಯ ಘೋಷ್​ ಹೇಳಿಕೆ ನೀಡಿದ್ದಾರೆ.

Comments are closed.