ಪ್ರಮುಖ ವರದಿಗಳು

118 ಮಂದಿ ಪ್ರಯಾಣಿಕರಿದ್ದ ಲಿಬಿಯಾ ವಿಮಾನವನ್ನು ಹೈಜಾಕ್ ಮಾಡಿದ ದುಷ್ಕರ್ಮಿಗಳು..ಸ್ಫೋಟದ ಬೆದರಿಕೆ..ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/Dy_vy0kbzq4

ವಲ್ಲೇಟ್ಟಾ: 118 ಪ್ರಯಾಣಿಕರಿದ್ದ ಲಿಬಿಯಾದ ವಾಣಿಜ್ಯ ವಿಮಾನವೊಂದನ್ನು ಶುಕ್ರವಾರ ಹೈಜಾಕ್ ಮಾಡಲಾಗಿದ್ದು, ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಾಲ್ಟಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಲಿಬಿಯಾದ ದೇಶಿಯ ಆಫ್ರಿಖಿಯಾ ಏರ್ ವೇಸ್ ನಲ್ಲಿ 118 ಮಂದಿ ಪ್ರಯಾಣಿಕರಿದ್ದರು. ವಿಮಾನದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ವಿಮಾನವನ್ನು ಸ್ಫೋಟಿಸುವ ಬೆದರಿಕೆಯೊಡ್ಡಿ ಹೈಜಾಕ್ ಮಾಡಿರುವುದಾಗಿ ವರದಿ ವಿವರಿಸಿದೆ.

ಸೆಬಾದಿಂದ ಟ್ರಿಪೋಲಿಯಾಗೆ ತೆರಳುತ್ತಿದ್ದ ವಿಮಾನವನ್ನು ಬೆದರಿಸಿ ಮಾಲ್ಟಾಗೆ ಮಾರ್ಗ ಬದಲಿಸಿ ವಿಮಾನವನ್ನು ಲ್ಯಾಂಡ್ ಮಾಡಿಸಿರುವುದಾಗಿ ವರದಿ ಹೇಳಿದೆ. ಲಿಬಿಯಾ ಕರಾವಳಿ ಪ್ರದೇಶದಿಂದ 500 ಕಿಮೀ ದೂರದಲ್ಲಿ ಮಾಲ್ಟಾ ದ್ವೀಪವಿದೆ.

ಮಾಲ್ಟಾದ ಸ್ಥಳೀಯ ಕಾಲಮಾನ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಮಾನ ಭೂಸ್ಪರ್ಶ ಮಾಡಿದೆ. ಭದ್ರತಾ ಪಡೆಗಳು ವಿಮಾನವನ್ನು ಸುತ್ತುವರೆದಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಲ್ಟಾದ ಮಾಧ್ಯಮ ವರದಿ ಮಾಡಿದೆ.

ಇನ್ನು ವಿಮಾನ ಅಪಹರಣವಾಗಿರುವ ಕುರಿತು ಮಾಲ್ಟಾದ ಪ್ರಧಾನಿ ಜೋಸೆಫ್ ಮಸ್ಕತ್ ಟ್ವೀಟ್ ಮಾಡಿದ್ದು, ಅಪಹರಣದ ವರದಿಯನ್ನು ಖಚಿತಪಡಿಸಿದ್ದಾರೆ.

Comments are closed.