ಪ್ರಮುಖ ವರದಿಗಳು

ವಕೀಲನೊಬ್ಬ ತನ್ನ ಪತ್ನಿಗೆ ಚಿತ್ರಹಿಂಸೆ ನೀಡುತ್ತಿರುವ ವೀಡಿಯೊ ವೈರಲ್ ! ಕಾರಣ ಏನು ಗೊತ್ತಾ…?

Pinterest LinkedIn Tumblr

 

https://youtu.be/q6tmwcxJQiI

ನವದೆಹಲಿ: ಕೋಪಿಷ್ಟ ಗಂಡ ತನ್ನ ಹೆಂಡ್ತಿ ಗಂಡು ಮಗುವಿಗೆ ಜನ್ಮ ನೀಡಿಲ್ಲ ಅಂತಾ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾನೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ದೆಹಲಿಯ ಹೈಕೋರ್ಟ್ ಲಾಯರ್ ಆಗಿರುವ ಈತ ತನ್ನ ಕುಟುಂಬದೊಂದಿಗೆ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ. ಮದುವೆಯಾಗಿ 15 ವರ್ಷಗಳಾಗಿದ್ದು, ಈಗಾಗಲೇ ಈತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದ್ರೆ ಒಂದು ಗಂಡು ಮಗು ಬೇಕು ಅಂತಾ ಹೆಂಡ್ತಿಯನ್ನ ಪೀಡಿಸುತ್ತಿದ್ದ. ಮಾತ್ರವಲ್ಲದೇ ಇದಕ್ಕಾಗಿ ಹೆಂಡತಿಯನ್ನು ಪ್ರತಿನಿತ್ಯ ಹಿಂಸಿಸಿ ಥಳಿಸುತ್ತಿದ್ದನು.

ಅಂತೆಯೇ ತಾಯಿಗೆ ಥಳಿಸುತ್ತಿರುವ ಸಂದರ್ಭದಲ್ಲಿ ಹೆಣ್ಣುಮಗಳೊಬ್ಬಳು ತಾಯಿಯ ಸಹಾಯಕ್ಕೆ ಬಂದಿದ್ದು, ಈ ವೇಳೆ ಮಗಳಿಗೂ ಛಡಿಯೇಟು ನೀಡಿದ್ದಾನೆ ಈ ಪಾಪಿ ತಂದೆ. ಇತ್ತ ಇನ್ನೋರ್ವ ಮಗಳು ಈ ಎಲ್ಲಾ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಮೂರು ನಿಮಿಷದ ವೀಡಿಯೋದೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾಳೆ.

Comments are closed.