ಮನೋರಂಜನೆ

ಭಾರೀ ಸುದ್ದಿ ಮಾಡಿದ್ದ ಆತ್ಮಹತ್ಯೆ ಮಾಡಿಕೊಳ್ಳುವ ವೀಡಿಯೊಂದರ ಅಸಲಿಯತ್ತು ಬಯಲು; ಹೊಸ ಚಿತ್ರವೊಂದರ ಪ್ರೊಮೋಷನ್’​ಗಾಗಿ ಮಾಡಿದ ವೀಡಿಯೊ…ನೀವೇ ನೋಡಿ…

Pinterest LinkedIn Tumblr

https://youtu.be/e9eYKgevXLE

ಆಂಧ್ರಪ್ರದೇಶ: ಇತ್ತೀಚಿಗೆ ಭಾರೀ ಸುದ್ದಿ ಮಾಡಿದ್ದ ಆತ್ಮಹತ್ಯೆ ಮಾಡಿಕೊಳ್ಳುವ ವೀಡಿಯೊಂದರ ಅಸಲಿಯತ್ತು ಇದೀಗ ಬಯಲಾಗಿದೆ. ಬ್ರೇಕ್ ಅಪ್ ಬಳಿಕ ಗರ್ಲ್ ಫ್ರೆಂಡ್ ಜೊತೆ ವಿಡಿಯೋ ಚ್ಯಾಟ್ ಮಾಡುತ್ತಲೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗುವ ವಿಡಿಯೋವೊಂದು ಬಾರೀ ಸದ್ದು ಮಾಡಿತ್ತು. ಸಾಮಾಜಿಕ ಜಾಲಾತಾಣಗಳಲ್ಲಿ ತುಂಬಾ ಹಂಗಾಮಾ ಎಬ್ಬಿಸಿದ್ದ ಈ ವಿಡಿಯೋವನ್ನು ವೇವು ನೋಡಿರಬಹುದು. ಹೊಸ ಚಿತ್ರವೊಂದರ ಪ್ರೊಮೋಷನ್’ಗಾಗಿ ಇಂತಹುದೊಂದು ಕೆಲಸಕ್ಕೆ ಕೈ ಹಾಕಿದೆ ಎಂದು ಚಿತ್ರ ತಂಡ ಒಪ್ಪಿಕೊಂಡಿದೆ.

https://youtu.be/153nsxM7lB0

ಈ ವಿಡಿಯೋ ಫೇಸ್ಬುಕ್ ಯೂಟ್ಯೂಬ್ ಟ್ವಿಟರ್ ಎಲ್ಲಾ ಕಡೆ ಹಂಗಾಮಾವೇ ಮಾಡಿತ್ತು. ವಿಡಿಯೋ ಚ್ಯಾಟ್ ಮಾಡುತ್ತಲೇ ಪ್ರೇಮಿಗಳು ಜಗಳವಾಡುತ್ತಾರೆ. ಜಗಳವಾಡುತ್ತಾ ಪ್ರಿಯತಮ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದು ನಿಜಕ್ಕೂ ಆತ್ಮಹತ್ಯೆ ಎಂದೇ ಬಿಂಬಿಸಲಾಗಿತ್ತು. ಮಾಧ್ಯಮಗಳೂ ಹೀಗೇ ವರದಿ ಮಾಡಿದ್ದವು.

ಆದರೆ ಬಳಿಕ ತಿಳಿಯುತ್ತದೆ ಅಸಲಿಯತ್ತು. ಹಿಂದಿ, ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡಿರುವ wish you happy break up’ ಎನ್ನುವ ಚಿತ್ರ ಪ್ರೊಮೋಷನ್’ಗೆ ಈ ವಿಡಿಯೋ ನಿರ್ಮಾಣವಾಗಿತ್ತು, ಇದು ಚಿತ್ರದ ಪ್ರೊಮೋಷನ್’ಗೆ ಅಂತ ಚಿತ್ರ ತಂಡವೇ ಒಪ್ಪಿಕೊಂಡಿದ್ದು. ಪ್ರೇಮ ವೈಫಲ್ಯವಿದ್ದರೂ ಜೀವ ತೆರಬೇಡಿ ಎನ್ನುವ ಸಂದೇಶ ನೀಡಿದ್ದೇವೆ ಎನ್ನುವುದು ಚಿತ್ರ ತಂಡದ ವಾದ.

ಈ ವಿಡಿಯೋದಲ್ಲಿ ಸಂದೇಶ ಇದೆ ಅಂತ ಹೇಳಿರುವ ಚಿತ್ರತಂಡ, ಈ ವೈರಲ್ ವಿಡಿಯೋದ ಬೆನ್ನಲ್ಲೇ ತಮ್ಮ ಚಿತ್ರದ ಅಸಲಿ ಟ್ರೈಲರ್ ಅನ್ನೂ ಬಿಡುಗಡೆಗೊಳಿಸಿದೆ. ಒಟ್ಟಾರೆ ಸೂಸೈಡ್ ವಿಡಿಯೋವೊಂದನ್ನು ಅಸಲಿ ಎಂದೇ ಬಿಂಬಿಸಿ ಬಳಿಕ ಅದನ್ನೇ ಚಿತ್ರದ ಪ್ರಚಾರಕ್ಕೆ ಬಳಸಿದ್ದಾರೆ ಇದನ್ನೆಲ್ಲ ಕ್ರಿಯೇಟಿವಿಟಿ ಅಂತೀರೋ? ದಗಲ್ಬಾಜಿ ಕೆಲಸ ಅಂತೀರೋ ನೀವೇ ತೀರ್ಮಾನಿಸಿ

Comments are closed.