https://youtu.be/tNcWOgiUOk8
ಭಾರೀ ಮಳೆಗೆ ಜಲಪ್ರಳಯವೇ ಸೃಷ್ಟಿಯಾಗಿದ್ದು, ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದ ಜನ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರವಾಹದಲ್ಲಿ ಸಿಲುಕಿದ್ದ ಬಸ್‍ನಿಂದ ಜನ ನೀರಿಗೆ ಹಾರುತ್ತಿರುವ ವೀಡಿಯೊ ವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡಲಾಗಿದೆ.
ಜೋರಾದ ಮಳೆಗೆ ಪ್ರವಾಹ ಸೃಷ್ಟಿಯಾಗಿ ಸೇತುವೆ ಮೇಲೆ ಹರಿದಿದೆ. ಈ ವೇಳೆ ಬಸ್ಸೊಂದು ಮಧ್ಯೆದಲ್ಲಿ ಸಿಲುಕಿಕೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ಪ್ರಯಾಣಿಕರು ಬಸ್ ಟಾಪ್ ಮೇಲಿರಿದ್ದರು. ಆದ್ರೆ ಬಸ್ ನಿಯಂತ್ರಣಕಳೆದುಕೊಂಡು ಪಲ್ಟಿಹೊಡೆದಿದ್ದು, ಪ್ರಯಾಣಿಕರೆಲ್ಲ ನೀರಿಗೆ ಹಾರಿದ್ದಾರೆ.
ಬಸ್ ನೀರಮೇಲೆ ಬೀಳುತ್ತಿದ್ದಂತೆ ಪ್ರಯಾಣಿಕರ ದಿಕ್ಕಾ ಪಾಲಾಗಿ ಹಾರಿದ್ದಾರೆ. ಇನ್ನೂ ಕೆಲವರು ನೀರುಪಾಲಾಗುತ್ತಿದ್ದ ಬಸ್ ಮೇಲೆ ನಿಂತಿದ್ದರು. ಇತ್ತ ಇದನ್ನೆಲ್ಲ ನೋಡುತ್ತಿದ್ದ ಜನ ಮಾತ್ರ ನೀರುಪಾಲಾಗುತ್ತಿದ್ದವರನ್ನ ರಕ್ಷಿಸಿಲಾಗದೇ ಮೂಕಪ್ರೇಕ್ಷಕರಂತೆ ನಿಂತಿದ್ದರು.
Comments are closed.