ಸಿಡ್ನಿ: ಆಸ್ಟ್ರೇಲಿಯಾದ ಮೆಲ್ಬರ್ನ್‍ನಲ್ಲಿರುವ ಸಮುದ್ರವೊಂದರಲ್ಲಿ ಸಾವಿರಾರು ಏಡಿಗಳು ಒಟ್ಟಿಗೆ ವಲಸೆ ಹೋಗುತ್ತಿರುವ ವಿಡಿಯೋವನ್ನ ಸೆರೆಹಿಡಿಯಲಾಗಿದೆ.
ಆಸ್ಟ್ರೇಲಿಯಾದ ವಿಜ್ಞಾನಿ ಶೆರ್ರೀ ಮ್ಯಾರಿಸ್, ಪೋರ್ಟ್ ಫಿಲಿಪ್ ಬೇ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಈ ಅಪರೂಪದ ದೃಶ್ಯವನ್ನು ನೋಡಿ ಬೆರಗಾಗಿದ್ದರು. ಸುಮಾರು 6 ಇಂಚು ಅಗಲ ದೇಹವಿರುವ ಸಾವಿರಾರು ಏಡಿಗಳು ಒಟ್ಟಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಿದ್ದವು.
ಈ ದೃಶ್ಯವನ್ನು ಸೆರೆಹಿಡಿದ ಶೆರ್ರಿ, ನಾನು 15-20 ವರ್ಷಗಳಿಂದ ಡೈವ್ ಮಾಡ್ತಿದ್ದೀನಿ. ಆದ್ರೆ ಯಾವತ್ತೂ ಇಷ್ಟೊಂದು ಸಂಖ್ಯೆಯಲ್ಲಿ ಏಡಿಗಳು ವಲಸೆ ಹೋಗುವುದನ್ನು ನೋಡಿರಲಿಲ್ಲ ಅಂತಾರೆ.
ಈ ಹಿಂದೆಯೂ ಏಡಿಗಳು ವಲಸೆ ಹೋಗುವುದನ್ನು ವಿಡಿಯೋ ಮಾಡಲಾಗಿದೆ. ಆದ್ರೆ ಈ ವರ್ಷ ವಲಸೆ ಹೋಗುತ್ತಿರುವ ಏಡಿಗಳ ಪ್ರಮಾಣ ಹಿಂದೆಂದೂ ಕಾಣದಷ್ಟು ದೊಡ್ಡದಾಗಿದೆ ಅಂತ ಹೇಳಲಾಗಿದೆ.
Comments are closed.