ರಾಷ್ಟ್ರೀಯ

ದೆಹಲಿಯಲ್ಲಿ 16 ವರ್ಷದ ಬಾಲಕನನ್ನು ನಗ್ನಗೊಳಿಸಿ ಗುಪ್ತಾಂಗಕ್ಕೆ ಖಾರದಪುಡಿ-ಬಿಯರ್ ಸುರಿದ ದುಷ್ಕರ್ಮಿಗಳು; ನಾಲ್ವರ ಬಂಧನ: ಈ ಪೈಶ್ಚಾಚಿಕ ಕೃತ್ಯದ ವೀಡಿಯೋ ನೋಡಿ…

Pinterest LinkedIn Tumblr

https://youtu.be/72oIT4Cnog8

 

ನವದೆಹಲಿ: ರಾಷ್ಚ್ರ ರಾಜಧಾನಿ ದೆಹಲಿ ಮತ್ತೊಂದು ಹೀನ ಕೃತ್ಯಕ್ಕೆ ಸಾಕ್ಷಿಯಾಗಿದ್ದು, 16 ವರ್ಷದ ಬಾಲಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ನಗ್ನಗೊಳಿಸಿ ಮನಸೋ ಇಚ್ಚೆ ಥಳಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

ದೆಹಲಿಯ ಇಂದೇರ್ ಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳು ಬಾಲಕನನ್ನು ಹಿಗ್ಗಾಮುಗ್ಗ ಥಳಿಸಿ ಆತನ ಮೇಲೆ ಅಸ್ವಾಭಾವಿಕ ಲೈಂಗಿಕ ವಿಕೃತಿ ನಡೆಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಕಳೆದ ಸೋಮವಾರವೇ ಪ್ರಕರಣ ನಡೆದಿದ್ದು, ಇದೀಗ ತಡವಾಗಿ ಈ ವಿಚಾರ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿದೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಪ್ರತ್ಯಕ್ಷ ದರ್ಶಿಗಳು ಹೇಳುವಂತೆ ಬಾಲಕನ್ನು ರಸ್ತೆಯಲ್ಲಿ ಬೆತ್ತಲಾಗಿ ಎಳೆದಾಡಿ ಆತನ ಗುಪ್ತಾಂಗದ ಮೇಲೆ ಮದ್ಯ ಚೆಲ್ಲಿ ಮೆಣಸಿನ ಪುಡಿ ಹಾಕಲಾಗಿದೆ. ಈ ಬಗ್ಗೆ ಬಾಲಕನ ಪೋಷಕು ಪೊಲೀಸರಲ್ಲಿ ದೂರಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಇದೀಗ ಪ್ರಕರಣ ಸಂಬಂಧ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Comments are closed.