ಮನೋರಂಜನೆ

ಬಾಂಗ್ರಾ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ ಕೊಹ್ಲಿ, ಗೇಲ್, ಮನ್‍ದೀಪ್ …ಈ ವೀಡಿಯೋ ನೋಡಿ

Pinterest LinkedIn Tumblr

https://youtu.be/RwcS-DpFNOw

ಬೆಂಗಳೂರು: ಆರ್‍ಸಿಬಿ ಈ ಬಾರಿಯ ಐಪಿಎಲ್ ಸೀಸನ್‍ನಲ್ಲಿ ಫೈನಲ್ ಪ್ರವೇಶಿಸಿರುವ ಮೊದಲ ತಂಡವಾಗಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಮಣಿಸಿ ಫೈನಲ್‍ಗೇರಿರುವ ಖುಷಿಯನ್ನು ತಂಡದ ಸದಸ್ಯರು ಪಾರ್ಟಿ ಮಾಡುವ ಮೂಲಕ ಆಚರಿಸಿದ್ದಾರೆ.

ಹೌದು. ಆರ್‍ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಕೆರಿಬಿಯನ್ ಆಟಗಾರ ಕ್ರಿಸ್ ಗೇಲ್ ಹಾಗೂ ಮನ್‍ದೀಪ್ ಸಿಂಗ್ ಬಾಂಗ್ರಾ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಮನ್‍ದೀಪ್ ಸಿಂಗ್ ಸ್ಟೆಪ್ ಹೇಳಿಕೊಡುತ್ತಿದ್ದರೆ, ಕೊಹ್ಲಿ ಹಾಗೂ ಗೇಲ್ ಅದನ್ನು ಅನುಕರಿಸಿ ಸಖತ್ತಾಗಿ ಕುಣಿದುಕುಪ್ಪಳಿಸಿದ್ದಾರೆ.

ಈ ಮೂವರು ಆಟಗಾರರು ಸ್ಟೆಪ್ ಹಾಕಿಕೊಂಡು ಕುಣಿಯುತ್ತಿದ್ದರೆ, ಇನ್ನುಳಿದವರು ಮೂಕಪ್ರೇಕ್ಷರಂತೆ ಕುಳಿತುಕೊಂಡು ಇವರ ನೃತ್ಯವನ್ನು ನೋಡುತ್ತಿದ್ದರು. ಕೊಹ್ಲಿ ಮತ್ತು ಟೀಂ ಬಾಂಗ್ರಾ ಶೈಲಿಯಲ್ಲಿ ಡಾನ್ಸ್ ಮಾಡಿರುವ ವಿಡಿಯೋವನ್ನು ಆರ್‍ಸಿಬಿ ಅಧಿಕೃತ ಯೂಟ್ಯೂಬ್ ಚಾನೆಲ್ ಶೇರ್‍ಮಾಡಿದೆ.

ಇಲ್ಲಿಯವರೆಗೆ ನಡೆದಿರುವ ಐಪಿಎಲ್ ಸೀಸನ್‍ನಲ್ಲಿ ಆರ್‍ಸಿಬಿ ಟ್ರೋಫಿ ಗೆದ್ದುಕೊಂಡಿಲ್ಲ. ಈ ಬಾರಿ ಆರ್‍ಸಿಬಿ ವಿಭಿನ್ನ ರೀತಿಯಲ್ಲಿ ಎಲ್ಲ ಫಾರ್ಮ್‍ನಲ್ಲೂ ಉತ್ತಮ ಪ್ರದರ್ಶನ ನೀಡಿ ಫೈನಲ್ ಗೆಲ್ಲುವ ಫೇವರೇಟ್ ತಂಡವಾಗಿದೆ.

Comments are closed.