ಅಂತರಾಷ್ಟ್ರೀಯ

ಬೆಂಕಿ ಅವಘಡದಿಂದ ಕಾಪಾಡಲು ಮಕ್ಕಳನ್ನು ಮೇಲಿನಿಂದ ಕೆಳಗೆ ಎಸೆದರು…! ಈ ವಿಡಿಯೋ ನೋಡಿ

Pinterest LinkedIn Tumblr

china-students

ಬೀಜಿಂಗ್: ಬೆಂಕಿ ಅವಘಡದಲ್ಲಿ ಕಿಂಡನ್‍ಗಾರ್ಟನ್ ಶಾಲೆಯ ಮಕ್ಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಿನಿಂದ ಕೆಳಗೆ ಎಸೆದು ಕಾಪಾಡಿದ ಘಟನೆ ಚೀನಾದಲ್ಲಿ ನಡೆದಿದೆ.

ಫ್ಯೂಜಿಯನ್ ಪ್ರಾಂತ್ಯದ 300 ಕ್ಕೂ ಅಧಿಕ ಮಂದಿ ಓದುತ್ತಿದ್ದ ನರ್ಸರಿ ಶಾಲೆಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ಕೂಡಲೇ ಕೆಲ ಮಕ್ಕಳು ಓಡಿ ಹೊರ ಬಂದರೆ ಮೊದಲನೇ ಮಹಡಿಯಲ್ಲಿ ಮಕ್ಕಳು ಸಿಕ್ಕಿ ಹಾಕಿಕೊಂಡಿದ್ದರು.

ಬೆಂಕಿ ಬಿದ್ದ ವಿಚಾರ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಬಂದು ಕಿಟಕಿ ಒಡೆದು ಮಕ್ಕಳನ್ನು ಮೇಲಿನಿಂದ ಕೆಳಗೆ ಎಸೆಯುವ ಮೂಲಕ ಕಾಪಾಡಿದ್ದಾರೆ. ಮೇಲಿನಿಂದ ಮಕ್ಕಳನ್ನು ಎಸೆಯುವ ವೇಳೆ ಜನರು ಕೆಳಗಡೆ ಬಟ್ಟೆಗಳನ್ನು ಹಿಡಿಯುವ ಮೂಲಕ ಮಕ್ಕಳ ರಕ್ಷಣೆ ಕಾರ್ಯದಲ್ಲಿ ಸಹಕರಿಸಿದ್ದಾರೆ.

https://youtu.be/QRm90xEz2u0

Write A Comment