ಅಂತರಾಷ್ಟ್ರೀಯ

ಚೀನಾದ ಯುನಾನ್ ಪ್ರಾಂತ್ಯದ ಅಪಾಯಕಾರಿ ಲಿ ಮಿಂಗ್ ಪರ್ವತಶ್ರೇಣಿಯಲ್ಲಿರುವ ಬೆಟ್ಟಗಳನ್ನು ಬರಿಗೈಯಲ್ಲಿ ಏರಿದ ಸ್ವಿಸ್ ಯುವತಿ; ಈ ವಿಡಿಯೋ ನೋಡಿ…ನಿಮಗೆ ಆಶ್ಚರ್ಯ ಆಗಬಹುದು…!

Pinterest LinkedIn Tumblr

=

ಬೀಜಿಂಗ್: ಪರ್ವತಾರೋಹಿಗಳಿಗೆ ಅತಿ ಅಪಾಯಕಾರಿಯೆಂದೇ ಹೇಳಲಾಗುವ ಚೀನಾದ ಯುನಾನ್ ಪ್ರಾಂತ್ಯದ ಲಿ ಮಿಂಗ್ ಪರ್ವತಶ್ರೇಣಿಯಲ್ಲಿರುವ ಬೆಟ್ಟಗಳನ್ನು ಬರಿಗೈಯಲ್ಲಿ ಏರಿ ಸ್ವಿಜರ್ಲೆಂಡ್​ನ 33ರ ಹರೆಯದ ಯುವತಿ ರಹೇಲ್ ಸ್ಚೆಲ್ಬ್ ಅಚ್ಚರಿ ಮೂಡಿಸಿದ್ದಾರೆ. ಸುಮಾರು 25 ದಿನಗಳ ಕಾಲ ಲಿ ಮಿಂಗ್ ಪರ್ವಶ್ರೇಣಿಯಲ್ಲಿರುವ ಬೆಟ್ಟಗಳನ್ನು 60 ದಾರಿಗಳ ಮೂಲಕ ಹತ್ತಿಳಿದಿದ್ದಾರೆ. ಇವುಗಳಲ್ಲಿ 65 ಅಡಿ ಎತ್ತರದ ಪರ್ವತದಿಂದ 1000 ಅಡಿ ಎತ್ತರದ ಪರ್ವತವೂ ಸೇರಿದೆ. ಬರಿಗೈಯಲ್ಲಿ ಪರ್ವತಗಳ ಬಿರುಕುಗಳನ್ನೇ ಆಧರಿಸಿ ಪರ್ವತವೇರುವ ರಹೇಲಾ ಸ್ವಿಜರ್ಲೆಂಡ್​ನಲ್ಲಿ ಶಾಲಾ ಶಿಕ್ಷಕಿಯಾಗಿದ್ದು ಪರ್ವತಾರೋಹಣ ಅವರ ಹವ್ಯಾಸಗಳಲ್ಲಿ ಒಂದಂತೆ.

Rahel1

Rahel13

Rahel123

Rahel1

ಸವಾಲು ಸಿಹಿನೆನಪು!: ಪರ್ವತಾರೋಹಿಗಳು ಪ್ರತಿ ಯೊಂದು ಬಾರಿ ಬೆಟ್ಟಯೇರಿದಾಗಲೂ ಹೊಸ ಅನುಭವ ಪಡೆದುಕೊಳ್ಳುತ್ತಾರೆ. ಕೆಲವು ತೀರಾ ಸರಳ ಎಂದೆನಿಸಿದರೆ ಇನ್ನೂ ಕೆಲವು ಕಷ್ಟಸಾಧ್ಯ ಎನಿಸುತ್ತದೆ. ಕೆಲವು ಬೆಟ್ಟಗಳನ್ನು ಅರ್ಧಗಂಟೆಯಲ್ಲಿ ಏರಿದರೆ ಇನ್ನೂ ಕೆಲವನ್ನು ಏರಲು ಒಂದು ದಿನ ಬೇಕಾಗುತ್ತದೆ. ಆದರೆ ಕಷ್ಟದಿಂದ ಬೆಟ್ಟವೇರಿದಾಗಲೆ ನಿಜವಾದ ಮಜ ಸಿಗುವುದು. ಅಡ್ಡಿಯಿದ್ದರೂ ಕೂಡಾ ಬೆಟ್ಟವೇರಿದ ಆ ನೆನಪು ಶಾಶ್ವತವಾಗುಳಿಯುತ್ತದೆ ಎನ್ನುವುದು ರಹೇಲಾ ಅಭಿಪ್ರಾಯ.

https://youtu.be/eGXvhUW3X_M

Write A Comment