ಸಣ್ಣ ಮಕ್ಕಳ ನಗು ಎಂತಹ ನೋವಿದ್ದರು ಹೋಗುವಂತೆ ಮಾಡುತ್ತದೆ. ಯಾವುದೇ ಕೃತಕ ಭಾವನೆ ವ್ಯಕ್ತಪಡಿಸದ ಮಗುವಿನ ನಗುವನ್ನು ನೋಡಲು ಪೋಷಕರು ಕಾಯುತ್ತಿರುತ್ತಾರೆ. ಆದರೆ ಇಲ್ಲೊಂದು ಮಗು ಇದೆ. ಈ ಮಗುವಿನ ಪೋಷಕರು ಎಷ್ಟೇ ಪ್ರಯತ್ನ ಪಟ್ಟರು ಈ ಮಗು ಮಾತ್ರ ನಗುವುದೇ ಇಲ್ಲ. ಬದಲಾಗಿ ಕೋಪದಿಂದ ಪೋಷಕರನ್ನೇ ದಿಟ್ಟಿಸಿ ನೋಡುತ್ತಿದೆ.
ಇಂತಹ ದೃಶ್ಯವಿರುವ ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಹಾಕಲಾಗಿದ್ದು, ಈ ಮಗುವಿನ ವಿಡಿಯೋವಾಗಲಿ, ಪೋಷಕರ ಬಗ್ಗೆಯಾಗಲಿ ಯಾವುದೇ ಮಾಹಿತಿ ಇಲ್ಲ. ಆದರೆ ಈ ಮಗು ವಿಡಿಯೋದಲ್ಲಿ ನಗದೇ ಇರುವುದು ಆಶ್ಚರ್ಯ ಮೂಡಿಸಿದ್ದು, ಹೀಗಾಗಿ ಈ ಮಗುವನ್ನು ಈಗ ಪ್ರಪಂಚದ ಕೋಪಿಷ್ಟ ಮಗು ಎಂದೇ ಕರೆಯಲಾಗುತ್ತಿದೆ.
ಸದ್ಯ ಈ ಯೂಟ್ಯೂಬ್‍ನ ವಿಡಿಯೋದಲ್ಲಿ ಮಗುವನ್ನು ನಗಿಸಲು ಅದರ ತಾಯಿ ಪ್ರಯತ್ನಿಸಿದ್ದಾರೆ. ಇದಕ್ಕಾಗಿ ತಾಯಿ ಸೊಂಟ, ಕೆನ್ನೆ ಮುಟ್ಟಿ ನಗಿಸಲು ಪ್ರಯತ್ನಿಸಿದ್ದಾರೆ. ಆದರೂ ನಗದ ಮಗು ಇನ್ನು ಸಿಟ್ಟು ಬಂದಂತೆ ವರ್ತಿಸಿದೆ. ಮಗುವಿನ ಈ ವಿಚಿತ್ರ ವರ್ತನೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.