ಅಂತರಾಷ್ಟ್ರೀಯ

ಈ ಪೋರನ ವಿಡಿಯೋ ಕೇವಲ 4 ದಿನದಲ್ಲಿ 80 ಲಕ್ಷ ಜನ ವೀಕ್ಷಿಸಿದ್ದಾರೆ….ಏನಿದು ನೀವೇ ನೋಡಿ…

Pinterest LinkedIn Tumblr

BOY

ವಾಷಿಂಗ್ಟನ್: ಕೈಯಿಂದಲೇ ಕಲ್ಲುಗಳನ್ನು ತುಂಡು ಮಾಡುವ, ತಮ್ಮ ದೇಹದ ಮೇಲೆ ವಾಹನಗಳನ್ನು ಹತ್ತಿಸುವ ಟೇಕ್ವಾಂಡೋ ಪಟುಗಳನ್ನು ನೀವು ನೋಡಿರಬಹುದು. ಆದರೆ ಈಗ ಮೂರು ವರ್ಷದ ಬಾಲಕನೊಬ್ಬ ಬೋರ್ಡನ್ನು ಕಾಲಿನಿಂದ ತುಂಡು ಮಾಡಿದ್ದಾನೆ.

ಕ್ಯಾಲಿಫೋರ್ನಿಯಾದ ಪೀಕ್ ಟೇಕ್ವಾಂಡೋ ಕೇಂದ್ರದಲ್ಲಿ ಮಾರ್ಗದರ್ಶಕರೊಬ್ಬರು 3 ವರ್ಷದ ಬಾಲಕನಿಗೆ ಮರದ ತುಂಡನ್ನು ಹೇಗೆ ಕಾಲಿನಿಂದ ತುಂಡು ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿರುತ್ತಾರೆ. ಆದರೆ ಆರಂಭದ ಬಾಲಕನಿಗೆ ಹೇಗೆ ತುಂಡು ಮಾಡಬೇಕು ಎಂಬುದನ್ನು ಹೇಳಿಕೊಡುತ್ತಾನೆ. ಅದರಂತೆ ಬಾಲಕ ಪ್ರಯತ್ನಿಸಿದರೂ ಬೋರ್ಡನ್ನು ತುಂಡು ಮಾಡಲು ಸಾಧ್ಯವಾಗಲಿಲ್ಲ.

ಈ ವೇಳೆ ಬಾಲಕನಿಗೆ ಸಿಟ್ಟು ಬಂದು ಬೋರ್ಡ್‍ನ ಮೇಲೆ ಕೆಲಸ ಸೆಕೆಂಡ್‍ಗಳ ಕಾಲ ಹಾರುತ್ತಾನೆ. ಈ ವೇಳೆ ಮಾರ್ಗದರ್ಶಕ ಆತನನ್ನು ಸಮಾಧಾನಗೊಳಿಸಿ ಹೇಗೆ ತುಂಡು ಮಾಡಬೇಕು ಎಂಬುದನ್ನು ವಿವರಿಸುತ್ತಾನೆ. ಕೊನೆಗೆ ಬಾಲಕ ಬೋರ್ಡನ್ನು ಕಾಲಿನಿಂದ ತುಂಡುಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಈತನ ಟೇಕ್ವಾಂಡೋ ಕಸರತ್ತನ್ನು ಪೀಕ್ ಟೇಕ್ವಾಂಡೋ ಕೇಂದ್ರ ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಆಗಸ್ಟ್ 8 ರಂದು ಅಪ್‍ಲೋಡ್ ಮಾಡಿದ್ದು ವೈರಲ್ ಆಗಿದೆ. ಫೇಸ್‍ಬುಕ್‍ನಲ್ಲಿ ಈಗಾಗಲೇ 80 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು 3.1 ಲಕ್ಷ ಜನ ವಿಡಿಯೋವನ್ನು ಶೇರ್ ಮಾಡಿದ್ದಾರೆ.

https://youtu.be/1ZLN9AzxVa8

Write A Comment