ಕರಾವಳಿ

ಹಾಲಾಡಿ | ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟದ ಪದಗ್ರಹಣ

Pinterest LinkedIn Tumblr

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌(ರಿ) ಕುಂದಾಪುರ-2 ತಾಲೂಕಿನ ಹಾಲಾಡಿ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಕಾರ್ಯಕ್ರಮವನ್ನು ಮುಂಡಕೋಡು ಶ್ರೀ ಜಲದುರ್ಗಾ ಅಮ್ಮನವರ ದೇವಸ್ಥಾನದಲ್ಲಿ ನಡೆಸಲಾಯಿತು.

ಬೆಳಿಗ್ಗೆ ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿದ್ದು 50ಕ್ಕೂ ಅಧಿಕ ದಂಪತಿಗಳು ವೃತ್ತದಾರಿಗಳಾಗಿ ಭಕ್ತಿಭಾವದಿಂದ ಪೂಜೆಯಲ್ಲಿ ಪಾಲ್ಗೊಂಡರು. ಅರ್ಚಕರಾದ ನರಹರಿ ಭಟ್ಟರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು.

ಬೆಳಿಗ್ಗೆ 10:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಚ ಸುಬ್ರಮಣ್ಯ ಶೆಟ್ಟಿರವರು ನೆರವೇರಿಸಿದರು. ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಸತೀಶ್‌ ಹೆಗಡೆ, ಮುಖ್ಯ ಅತಿಥಿಗಳಾಗಿ ಸತ್ಯನಾರಾಯಣ ರಾವ್‌, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಸೂರ್ಯಪ್ರಕಾಶ್‌ ದಾಮ್ಲೆ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯರು,  ರಾಜೀವ್‌ ಹೆಗಡೆ, ಅಧ್ಯಕ್ಷರು, ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡಕೋಡು,ಡಾ| ಹೇಮಂತ್‌,ವೈದ್ಯಾದಿಕಾರಿ, ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆನಂದ ಮುಧೂರಿ, ತಾಲೂಕು ಭಜನಾ ಪರಿಷತ್‌ ಅಧ್ಯಕ್ಷರು ಭಾಗವಹಿಸಿದ್ದರು. ನೀಡಿದ ಸ್ಫರ್ದಾ ಸಾರಥಿ ಕೆಎಎಸ್‌ ಅಕಾಡೆಮಿ,ಕುಂದಾಪುರ ಇದರ  ನಿರ್ದೇಶಕರಾದ ಆದರ್ಶ ಕೆಲ ರವರು ಧರ್ಮ, ಭಕ್ತಿ, ಪೂಜಾ, ಪರಂಪರೆ ಹಾಗೂ ಸನಾತನ ಸಂಸ್ಕೃತಿಯ ಮಹತ್ವವನ್ನು ಸಾರುವ ಧಾರ್ಮಿಕ ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಗಣ್ಯರಿಂದ  07 ಒಕ್ಕೂಟದ ಪದಗ್ರಹಣವನ್ನು ನೆರವೇರಿಸಲಾಗಿದ್ದು ಹಾಲಾಡಿ, ಹೈಕಾಡಿ, ಮುಧೂರಿ, ಕುಳ್ಳುಂಜೆ, ರಟ್ಟಾಡಿ, ಹಾರ್ದಳ್ಳಿ-ಮಂಡಳ್ಳಿ, ಹೆಂಗವಳ್ಳಿ ಕಾರ್ಯಕ್ಷೇತ್ರಗಳ 700ಕ್ಕೂ ಮಿಕ್ಕಿ ಪ್ರಗತಿಬಂಧು ಸ್ವಸಹಾಯ ಸಂಘ ಸದಸ್ಯರುಗಳು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ  ಸ್ವಸಹಾಯ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಲಕ್ಷ್ಮೀ ಎಸ್‌ ವರದಿ ಮಂಡಿಸಿದರು. ಯೋಜನಾಧಿಕಾರಿ ಸುಧೀರ್‌ ಹಂಗಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕುಂದಾಪುರ ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ಗೌಡ ಕಾರ್ಯಕ್ರಮ ನಿರ್ವಹಿಸಿ, ಮುಧೂರಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಮಂಜುಳಾ ಶೆಟ್ಟಿ ಸ್ವಾಗತಿಸಿ, ಹಾರ್ದಳ್ಳಿ-ಮಂಡಳ್ಳಿ ಸೇವಾಪ್ರತಿನಿಧಿ ಗೀತಾ ವಂದಿಸಿದರು. ಈ ಸಂದರ್ಭ ವಲಯದ 6 ಮಂದಿ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Comments are closed.