ಮುಂಬಯಿ : ಲಾಕ್ ಡೌನ್ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಾರಂಭದಿಂದಲೇ ಕುಲಾಲ ಸಂಘ ಮುಂಬಯಿಯ ಕಾರ್ಯಕರ್ತರು ಸದ್ದು ಗದ್ದಲವಿಲ್ಲದೆ ಅಸಾಯಕ ಸಮಾಜ ಬಾಂಧವರಿಗೆ ಹಾಗೂ ಇತರ ಸಮಾಜದವರಿಗೆ ಒಟ್ಟು 200 ರಕ್ಕೂ ಮಿಕ್ಕಿ ಕುಟುಂಬಕ್ಕೆ ದೈನಂದಿನ ದವಸದಾನ್ಯಗಳನ್ನು ವಿತರಿಸಿದೆ. ಇದುವರಿಗೆ ದಾನಿಗಳ ಸಹಾಯದಿಂದ ಮುಂಬಯಿ ಮಹಾನಗರ, ಉಪನಗರ, ನವಿಮುಂಬಯಿ ಹಾಗೂ ಪರಿಸರದಲ್ಲಿ ಸುಮಾರು ಐದು ಲಕ್ಷ ರೂಪಾಯಿಗೂ ಹೆಚ್ಚಿನ ಮೊತ್ತದ ಆಹಾರ ಸಾಮಾಗ್ರಿಗಳನ್ನು ವಿತರಿಸುದರೊಂದಿಗೆ ಮಾನವೀಯತೆಯನ್ನು ಮೆರೆದಿದೆ.
ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ ಕುಲಾಲ್ ಇವರ ಮಾರ್ಗದರ್ಶನದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು, ಮಹಿಳಾ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಯ ಪ್ರಮುಖರು ಎಲ್ಲರೂ ಈ ಕಾರ್ಯದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ್ದು ಅನೇಕರು ಇದರಿಂದ ಪ್ರಯೋಜನ ಪಡೆಯುತ್ತಿರುವರು.
ಯಾಂತ್ರಿಕ ಮಾಧ್ಯಮದ ಮೂಲಕ ಸಮಾಜದ ಎಲ್ಲಾ ಸದಸ್ಯರಿಗೆ ಸಂಪರ್ಕಿಸಬೇಕಾದ ಸದಸ್ಯರ ಹೆಸರು, ಸ್ಥಳ ಹಾಗೂ ಮೊಬೈಲ್ ನಂಬರನ್ನು ರವಾನಿಸಲಾಗಿದ್ದು ಅಗತ್ಯವಿದ್ದವರು ಈಗಾಗಲೇ ಅವರಿಗೆ ಸಮೀಪವಿರುವ ಕಾರ್ಯಕರ್ತರನ್ನು ಸಂಪರ್ಕಿಸುತ್ತಿದ್ದು, ಅವರಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಸಮೀಪದ ಅಂಗಡಿಗಳಿಂದ ಪಡೆಯುವಂತೆ ಅನುಕೂಲ ಮಾಡಿದ್ದು ಸಂಘವು ದಾನಿಗಳ ಸಹಾಯದಿಂದ ಪೇಟಿಎಂ, ಗೂಗಲ್ ಪೇ ಯಾ ಪೇ ಪೋನ್ ಮುಂತಾದ ಮಾದ್ಯಮದ ಮೂಲಕ ಹಣವನ್ನು ಪಾವತಿಸುತ್ತಿದೆ. ಈ ಮೂಲಕ ಸಂಘವು ಕಳೆದ ಸುಮಾರು 45 ದಿನಗಳಿಂದ ಅನೇಕ ಅಸಾಯಕರಿಗೆ ಸಹಾಯ ಮಾಡುತ್ತಾ ಬಂದಿದೆ. ಆಹಾರ ಸಾಮಾಗ್ರಿಗಳು ಮಾತ್ರವಲ್ಲದೆ ಔಷದಿಗೂ ಬೇಕಾದ ಸಹಾಯವನ್ನು ಸಂಘ ಈ ಸಮಯದಲ್ಲಿ ಮಾಡುತ್ತಿದೆ.
ಅಧ್ಯಕ್ಷರಾದ ದೇವದಾಸ ಕುಲಾಲ್ ಇವರೊಂದಿಗೆ ಉಪಾಧ್ಯಕ್ಷರಾದ ರಘು ಮೂಲ್ಯ, ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್, ಕೋಶಾಧಿಕಾರಿ ಜಯ ಎಸ್ ಅಂಚನ್ ಇತರ ಪದಾಧಿಕಾರಿಗಳಾದ ಉಮೇಶ್ ಎಂ. ಬಂಗೇರ ಅಶೋಕ್ ಕುಲಾಲ್, ಸುನಿಲ್ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್, ಮಾಲತಿ ಜೆ ಅಂಚನ್, ನವಿ ಮುಂಬಯಿ ಸ್ಥಳೀಯ ಸಮಿತಿಯ ವಾಸು ಎಸ್ ಬಂಗೇರ ಮತ್ತು ಎಲ್ ಆರ್ ಮೂಲ್ಯ, ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಸುಂದರ ಮೂಲ್ಯ ಮತ್ತು ಮೋಹನ್ ಬಂಜನ್ – ಥಾಣೆ – ಕಸಾರ – ಕರ್ಜತ್ ಭಿವಂಡಿ ಸ್ಥಳೀಯ ಸಮಿತಿಯ ಡಿ. ಐ, ಮೂಲ್ಯ ಮತ್ತು ಹರಿಯಪ್ಪ ಮೂಲ್ಯ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕೆ. ಗೋಪಾಲ್ ಬಂಗೇರ ಮತ್ತು ಸತೀಶ್ ಬಂಗೇರ, ಸಿ.ಎಸ್.ಟಿ. – ಮುಲೂಂಡ್ – ಮಾನ್ಕುರ್ಡ್ ಸ್ಥಳೀಯ ಸಮಿತಿಯ ಸುಂದರ್ ಮೂಲ್ಯ ಮತ್ತು ಸಂಜೀವ ಬಂಗೇರ, ಹೆಲ್ಪ ಲೈನ್ ಮೂಲಕ ಪತ್ರಕರ್ತ ಬಿ. ದಿನೇಶ್ ಕುಲಾಲ್ ಅಲ್ಲದೆ ವಿವಿದೆಡೆ ನೆಲೆಸಿರುವ ಸಂಘದ ಅನೇಕ ಸದಸ್ಯರು ಈ ಕಾರ್ಯದಲ್ಲಿ ಕ್ರೀಯಾಶೀಲರಾಗಿದ್ದಾರೆ.
ಕುಲಾಲ ಸಂಘ ಮುಂಬಯಿಯ ಪ್ರತಿನಿಧಿಗಳು ಈ ಎಲ್ಲಾ ಪರಿಸರಗಳಲ್ಲಿ ನೆಲೆಸಿದ್ದು ವಿವಿದೆಡೆ ನೆಲೆಸಿರುವ ಹಾಗೂ ಸ್ಥಳೀಯ ಸಮಿತಿಯ ಕಾರ್ಯಕರ್ತರ ದೂರವಾಣಿ ಕ್ರಮಾಂಕದ ಮೂಲಕ ಜನರು ಅಗತ್ಯವಿದ್ದಾಗೆ ಇವರನ್ನು ಸಂಪರ್ಕಿಸುತ್ತಿದ್ದು ಅವರೆಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಿ ಯಾವುದೇ ಪ್ರಚಾರ ಬಯಸದೇ ಸಹಕರಿಸುತ್ತಿರುವರು.
ವರದಿ : ಈಶ್ವರ ಎಂ. ಐಲ್
Comments are closed.