ಕರಾವಳಿ

ಬೆಂಜನ ಪದವು ಸಮೀಪ ಎರಡು ಬಸ್ಸುಗಳ ಮಧ್ಯೆ ಅಪಘಾತ : 20 ಅಧಿಕ ಮಂದಿಗೆ ಗಾಯ – ಮೂವರು ಗಂಭೀರ

Pinterest LinkedIn Tumblr

ಬಂಟ್ವಾಳ, ಫೆಬ್ರವರಿ.16 ಬಂಟ್ವಾಳ ತಾಲೂಕಿನ ಬೆಂಜನ ಪದವು ಸಮೀಪದ ಬಿ.ಸಿ. ರೋಡ್-ಪೊಳಲಿ ರಸ್ತೆಯ ಕಲ್ಪನೆ ತಿರುವಿನಲ್ಲಿ ಇಂದು ಮಧ್ಯಾಹ್ನ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಎರಡು ಬಸ್ಸುಗಳ ಮಧ್ಯೆ ಉಂಟಾದ ಅಪಘಾತದಲ್ಲಿ ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಎರಡೂ ಬಸ್‌ಗಳು ಬಿ.ಸಿ.ರೋಡ್‌ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದವು. ಒಂದರ ಹಿಂದೊಂದು ಬರುತ್ತಿದ್ದ ಬಸ್‌‌ಗಳು ಕಲ್ಪನೆ ತಿರುವಿನಲ್ಲಿ ಢಿಕ್ಕಿಯಾಗಿದ್ದು, ಮುಂದಿನಿಂದ ಹೋಗುತ್ತಿದ್ದ ರೂಟ್ ಬಸ್‌‌ಗೆ ಹಿಂದಿನಿಂದ ಬರುತ್ತಿದ್ದ ಮದುವೆ ದಿಬ್ಬಣದ ಬಸ್ ಢಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವಾಪಸು ನೇರವಾಗಿ ನಿಂತಿದೆ. ಹಿಂಬದಿಯಿಂದ ಢಿಕ್ಕಿ ಹೊಡೆದ ಬಸ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ರಸ್ತೆ ಬದಿ ಕಂದಕಕ್ಕೆ ಉರುಳಿದೆ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಸಿರೋಡಿನ ಸ್ಪರ್ಶ ಕಲಾ ಮಂದಿರಕ್ಕೆ ಬಜಪೆಯಿಂದ ಮದುಮಗಳ ದಿಬ್ಬಣವನ್ನು ಕರೆದುಕೊಂಡ ಬಂದ ಬಸ್ ಮದುವೆ ಮುಗಿಸಿ ವಾಪಾಸು ಹೋಗುವ ವೇಳೆ ಈ ಘಟನೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್‌‌ನಲ್ಲಿ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಂದರ್ಭ ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದರು.

ಸೂಕ್ತವಾದ ಚಿಕಿತ್ಸೆ ನೀಡಲು ಹಾಗೂ ಅಗತ್ಯವಿದ್ದಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡುವಂತೆ ತಹಶೀಲ್ದಾರ್ ರಶ್ಮಿ ಎಸ್. ಆರ್.ಹಾಗೂ ಪೋಲೀಸರಿಗೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.