ಕರಾವಳಿ

ಮಂಗಳೂರು ಪುರಭವನದಲ್ಲಿ ಇಂದಿನಿಂದ 3 ದಿನಗಳ ಗಡಿನಾಡು ಸಂಸ್ಕೃತಿ ಉತ್ಸವ

Pinterest LinkedIn Tumblr

ಮಂಗಳೂರುಃ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ನವೆಂಬರ್ 5 ಮಂಗಳವಾರದಿಂದ ನವೆಂಬರ್ 7ರ ತನಕ ಮೂರು ದಿನಗಳ ಗಡಿನಾಡು ಸಂಸ್ಕೃತಿ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

ಗಡಿನಾಡು ಸಂಸ್ಕೃತಿ ಉತ್ಸವ ಉದ್ಘಾಟನೆಯನ್ನು ನವೆಂಬರ್ 5ರಂದು ಸಂಜೆ 4 ಗಂಟೆಗೆ ದಕ್ಷಿಣ ಕನ್ನಡ ಮುಖ್ಯಕಾರ್ಯ ನಿರ್ವಹಣಾಧಿಕಾರಿ  ಡಾ. ಆರ್. ಸೆಲ್ವಮಣಿ ನೆರವೇರಿಸಲಿದ್ದಾರೆ.

ಗಡಿನಾಡು ಸಂಸ್ಕೃತಿ ಉತ್ಸವ ಅಂಗವಾಗಿ ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಯಕ್ಷಗಾನ ಸೇರಿದಂತೆ ವೈವಿಧ್ಯಮಯ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಉದ್ಘಾಟನಾ ಸಮಾರಂಭ ನ.5ರಂದು ಸಂಜೆ 6.15ಕ್ಕೆ ನಡೆಯಲಿದೆ.ಅದಕ್ಕೆ ಮೊದಲು ಮತ್ತು ಉದ್ಘಾಟನೆ ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Comments are closed.