ಕರಾವಳಿ

ಹಬ್ಬಗಳನ್ನು ಕುಟುಂಬದ ಸದಸ್ಯರೊಡನೆ ಆಚರಿಸಿ : ಸಂಸ್ಕಾರ ಭಾರತಿಯ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ 

Pinterest LinkedIn Tumblr

ಮಂಗಳೂರು, ನವೆಂಬರ್.03 : ಹಬ್ಬಗಳನ್ನು ಕುಟುಂಬದ ಸದಸ್ಯರೊಡನೆ ಆಚರಿಸಿ . ದೀಪಾವಳಿ ಹಬ್ಬ ಹಿಂದಿನ ಕಾಲದಲ್ಲಿ ಮನೆ ಮಂದಿ ಜತೆ ಒಟ್ಟಿಗೆ ಆಚರಿಸುತ್ತಿದ್ದ ಪದ್ಧತಿ ಕಡಿಮೆಯಾಗುತ್ತಿದ್ದು ಹಬ್ಬಗಳನ್ನು ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಆಚರಿಸದರೆ ಹಬ್ಬವು ಅರ್ಥಪೂರ್ಣವಾಗುತ್ತದೆ ಎಂದು ಸಂಸ್ಕಾರ ಭಾರತಿ ಇದರ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಯವರು ಸಂಸ್ಕಾರ ಭಾರತಿ ಆಶ್ರಯದಲ್ಲಿ ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟ್ರಮಣ ದೇವಸ್ಥಾನದ ವೆಂಕಟಾಚಲಪತಿ ಸಭಾಗ್ರಹದಲ್ಲಿ  ನಡೆದ ದೀಪಾವಳಿ ಕುಟುಂಬ ಮಿಲನದ ಸಮಾರಂಭದಲ್ಲಿ ಹೇಳಿದರು.

ದೀಪಾವಳಿಯ ಆಚಾರಣೆಯ ಮಹತ್ವ ಮತ್ತು ಕರಾವಳಿಯಲ್ಲಿ ಬಲಿಂದ್ರನನ್ನು ದೀಪಾವಳಿ ಸಂದರ್ಭ ಕರೆಯುವ ಬಗ್ಗೆ ಮುಖ್ಯ ಭಾಷಣ ಕಾರರಾಗಿ ಆಗಮಿಸಿದ್ದ ಶಾರದಾ ವಿದ್ಯಾಲಯದ ಉಪ ಪ್ರಾಂಶುಪಾಲ ದಯಾನಂದ ಕಟೀಲ್ ಹೇಳಿದರು .ಬಾಲಕೃಷ್ಣ ಕತ್ತಲ್ಸರ್ ಪೆರಾರ ಇವರಿಂದ ಬಲಿಂದ್ರ ಕರೆಯುವ ವಿಶಿಷ್ಟ ಕಾರ್ಯಕ್ರಮ ನೆರವೇರಿತು .

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೈಶ್ಯ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ್ ಶೇಟ್ ದೀಪಾವಳಿಯ ಸಂದೇಶ ಹೇಳಿದರು ಡೊಂಗರಕೇರಿ ಶ್ರೀವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವರದರಾಯ ನಾಗ್ವೇಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು

ಸಂಸ್ಕಾರ ಭಾರತಿಯ ಮಂಗಳೂರು ಘಟಕದ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಉಪಸ್ಥಿತರಿದ್ದರು . ಪ್ರಧಾನ ಕಾರ್ಯದರ್ಶಿ ಮಾಧವ ಭಂಡಾರಿ ಸ್ವಾಗತಿಸಿದರು .ವಿದುಷಿ ಶ್ರೀಲತಾ ನಾಗರಾಜ್ ವಂದಿಸಿದರು. ಸಂಸ್ಕಾರ ಭಾರತಿಯ ಪ್ರಚಾರ ಪ್ರಮುಖ್ ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸದರು . ಸಂಸ್ಕಾರ ಭಾರತಿಯ ನಾಗರಾಜ್ ಶೆಟ್ಟಿ, ಧನಪಾಲ್ ಶೆಟ್ಟಿಗಾರ್ ,ರಘುವೀರ್ ಗಟ್ಟಿ, ಗಣೇಶ್ ಕುಮಾರ್, ಕಿರಣ್ ಕುಮಾರ್ ಸಹಕರಿಸಿದರು

Comments are closed.