ಕರಾವಳಿ

ಕೆಥೋಲಿಕ್ ಸಭಾ ಮಂಗಳೂರು ಧರ್ಮ ಪ್ರಾಂತ ಇದರ ರಾಜಕೀಯ ಸಂಚಾಲಕರೊಂದಿಗೆ ಕಾಂಗ್ರೇಸ್ ಮುಖಂಡರು ಬಿಜೆಪಿ ಸೇರ್ಪಡೆ

Pinterest LinkedIn Tumblr

ಮಂಗಳೂರು, ನವೆಂಬರ್, 03: ಕಾಂಗ್ರೇಸ್ ಮುಖಂಡ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಧರ್ಮ ಪ್ರಾಂತ ಇದರ ರಾಜಕೀಯ ಸಂಚಾಲಕ, ಅಖಿಲ ಭಾರತ ಕೆಥೋಲಿಕ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಆಗಿರುವ ದೀಪಕ್ ಅತ್ತಾವರ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಪ್ರಮುಖ ಕಾರ್ಯಕರ್ತರಾದ ಸಿಡ್ನಿ ಫೆರ್ನಾಂಡೀಸ್ ಫಳ್ನೀರ್, ನವೀನ್ ವಾಸ್ ಬಾಬುಗುಡ್ಡ ಇವರು ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲು ಹೊದೆಸಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ದೀಪಕ್ ಅತ್ತಾವರ, ಕಳೆದ 25 ವರ್ಷದಿಂದ ಕಾಂಗ್ರೇಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದರೂ ಸೂಕ್ತ ಗೌರವ ದೊರೆಯದ ನಿಟ್ಟಿನಲ್ಲಿ ನಾವು ಭಾರತೀಯ ಜನತಾ ಪಾರ್ಟಿ ಸೇರಿದ್ದೇವೆ.ಶೇಖಡ 99 ರಷ್ಟು ಕ್ರೈಸ್ತ ಸಮುದಾಯದ ಮತ ಪಡೆದರೂ ಕ್ರೈಸ್ತ ಸಮುದಾಯದ ಶ್ರೇಯೋಭಿವೃದ್ಧಿಗೆ ಕಾಂಗ್ರೇಸ್ ಪಕ್ಷ ನಿರಾಸಕ್ತಿ ತೋರುವ ಬಗ್ಗೆ ನೊಂದು ಈ ನಿರ್ಧಾರ ಕೈಗೊಂಡಿದ್ದೇವೆ.

ರಾಷ್ಟ್ರೀಯ ಮಟ್ಟದ ಪ್ರಬಲ ನಾಯಕತ್ವ, ಹಾಗೂ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಅವರ ನಾಯಕತ್ವವನ್ನು ಬಿಚ್ಚು ಮನಸ್ಸಿನಿಂದ ಒಪ್ಪಿಕೊಂಡು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಘೋಷಣೆಯಿಂದ ಪ್ರಭಾವಿತರಾಗಿ ನಾವು ಇಂದು ಬಿಜೆಪಿ ಸೇರ್ಪಡೆಗೊಂಡಿದ್ದೇವೆ.

ಮನಪಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶಕ್ತಿ ವ್ಯಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಭಾಸ್ಕರ್ ಚಂದ್ರ ಶೆಟ್ಟಿ, ನಿತಿನ್ ಕುಮಾರ್ ಉಪಸ್ಥಿತರಿದ್ದರು.

Comments are closed.