ಕರಾವಳಿ

ಯಕ್ಷಪ್ರತಿಭೆ ದಶಮಾನೋತ್ಸವ : ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಪ್ರಶಸ್ತಿ ಪ್ರದಾನ‌ – ಸಾಧಕ ಸನ್ಮಾನ‌

Pinterest LinkedIn Tumblr

ಮಂಗಳೂರು : ಯಕ್ಷಪ್ರತಿಭೆ (ರಿ), ಮಂಗಳೂರು ಇದರ ದಶಮಾನೋತ್ಸವ ಹಾಗೂ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಪ್ರಶಸ್ತಿ ಪ್ರದಾನ‌ ಅಲ್ಲದೆ ಸಾಧಕ ಸನ್ಮಾನ‌ ಇತ್ತೀಚೆಗೆ ಮಂಗಳೂರು ಪುರಭವನದಲ್ಲಿ ಜರಗಿತು.

ಈ ಬಾರಿಯ ‘ಆಸ್ರಣ್ಣ ಪ್ರಶಸ್ತಿ’ಯನ್ನು ತೆಂಕು ತಿಟ್ಟಿನಯುವ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿಯವರಿಗೆ ನೀಡಲಾಯಿತು.

ಶ್ರೀಮತಿ ಸುಮಂಗಲಾ ರತ್ನಾಕರರಾವ್, ಪ್ರಭಾಕರ ಸುವರ್ಣದುಬೈ, ಅ.ನ. ಭ. ಪೊಳಲಿಯವರಿಗೆ ಯಕ್ಷ ಸಂಮಾನ ಹಾಗೂ ನಾಟಿ ವೈದ್ಯ ಶ್ರೀನಿವಾಸ ಪೂಜಾರಿ, ಕ್ರೀಡಾ ಅಂಕಣಗಾರ ಜಗದೀಶ್ಚಂದ್ರ‌ ಅಂಚನ್, ಭಟ್‌ ಕ್ಯಾಟರರ್ಸ್‌ನ ರವಿಭಟ್‌ ಅವರನ್ನುಗೌರವಿಸಲಾಯಿತು,

ಇದಲ್ಲದೆ ಕರ್ನಾಟಕ ತುಳು ಸಾಹಿತ್ಯ‌ ಅಕಾಡೆಮಿ ‌ಅಧ್ಯಕ್ಷದಯಾನಂದ ಕತ್ತಲ್ ಸಾರ್, ಯಕ್ಷಗಾನ‌ಅಕಾಡೆಮಿ ಸದಸ್ಯ ನವನೀತ ಶೆಟ್ಟಿಕದ್ರಿ, ತುಳು‌ಅಕಾಡೆಮಿಯ ಸದಸ್ಯಕಡಬ ದಿನೇಶ್‌ರೈ‌ಇವರೆಲ್ಲರನ್ನು ಗೌರವಿಸಿ ಅಭಿನಂದಿಸಲಾಯ್ತುಡಾ| ಎಂ ಮೋಹನ್ ಆಳ್ವ ಅಧ್ಯಕ್ಷತೆಯಲ್ಲಿಜರಗಿದ ಈ ಸಮಾರಂಭದಲ್ಲಿಕಟೀಲು ಲಕ್ಷ್ಮೀನಾರಾಯಣ‌ಆಸ್ರಣ್ಣ ಆಶೀರ್ವಚನ ನೀಡಿದರು.

ಶ್ರೀಪತಿ ಭಟ್ ಮೂಡಬಿದಿರೆ, ಭುಜಬಲಿ ಧರ್ಮಸ್ಥಳ, ಡಿ. ಆರ್. ರಾಜು ಕಾರ್ಕಳ,ಕಚ್ಚೂರುಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಪ್ರಬಂಧಕ ಪದ್ಮನಾಭ, ಹರಿಕೃಷ್ಣ ಪುನರೂರು, ನ್ಯಾಯವಾದಿ ಮೋಹನ್‌ದಾಸರೈ, ಗುಂಡಿಲಗುತ್ತು ಶಂಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಡಾ.ಎಂ. ಪ್ರಭಾಕರ ಜೋಶಿಯವರು ಸಂಸ್ಮರಣೆ ಹಾಗೂ ಅಭಿನಂದನಾಭಾಷಣಗೈದರುಯಕ್ಷ ಪ್ರತಿಭೆಯ ಸಂಚಾಲಕ ಹಾಗೂ ಆಸ್ರಣ್ಣ ಸಂಸ್ಮರಣಾ ಸಮಿತಿಯ‌ಅಧ್ಯಕ್ಷ ಸಂಜಯಕುಮಾರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು.

ಸತ್ಯಾನಂದರಾವ್ ಪೇಜಾವರಕಾರ್ಯಕ್ರಮ ನಿರೂಪಿಸಿದರು, ಸಭಾಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು.

Comments are closed.