ಕರಾವಳಿ

ರೈಲು ಪ್ರಯಾಣಿಕರ ಸೋಗಿನಲ್ಲಿ ಕಳ್ಳತನ: ಶಿರೂರು ಬಳಿ ಇಬ್ಬರು ಯುವಕರ ಬಂಧನ

Pinterest LinkedIn Tumblr

ಕುಂದಾಪುರ/ಭಟ್ಕಳ: ಪ್ರಯಾಣಿಕರ ಸೋಗಿನಲ್ಲಿ ರೈಲು ಹತ್ತಿ ಅದೇ ರೈಲಿನಲ್ಲಿ ಇತರೆ ರಯಾಣಿಕರ ಚಿನ್ನಾಭರಣ, ಮೊಬೈಲ್ ಮೊದಲಾದವುಗಳನ್ನು ಕದಿಯುತ್ತಿದ್ದ ಇಬ್ಬರು ಯುವಕರನ್ನು ರೈಲ್ವೇ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಉಪ್ಪಿನಂಗಡಿ ಮೂಲದ ಅಬ್ದುಲ್ ರಶೀದ್ (22), ಹಾಗೂ ಬಂಟ್ವಾಳದ ಇಶಾಕ್ (19) ಬಂಧಿತ ಆರೋಪಿಗಳು. ಇವರಿಂದ 23, 700 ನಗದು, ಮೊಬೈಲ್ ಫೋನ್, ವಾಚ್ ಹಾಗೂ ಇತರೆ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ: ನ.1 ಶುಕ್ರವಾರ ವತಿ ಎಕ್ಸ್‌ಪ್ರೆಸ್‌ ರೈಲಿನಿಂದ ಇಬ್ಬರು ಯುವಕರು ಹಾರಿ ಬೈಂದೂರು ಸಮೀಪದ ಶಿರೂರು ಕಡೆಗೆ ಓಡುತ್ತಿಇದ್ದ ಬಗ್ಗೆ ಮಾಹಿತಿ ಪಡೆದ ರೈಲ್ವೇ ಪೊಲೀಸರು ಇಬ್ಬರನ್ನು ಬೆನ್ನಟ್ಟಿದ್ದು ಅಡಗಿ ಕುಳಿತಿದ್ದ ಇಬ್ಬರನ್ನು ಅಂಡರ್ ಬ್ರಿಡ್ಜ್ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರು ಕೂಡ ಬೈಂದೂರಿನಿಂದ ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸಿ ಎಸಿ ಕೋಚ್’ಗೆ ತೆರಳಿ ಅಲ್ಲಿ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ. ರೈಲಿನ ಎಸಿ ಕೋಚಿನಲ್ಲಿ ರಶೀದ್ ತೆರಳಿ ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಅವರಿಂದ ಬ್ಯಾಗ್ ಕದ್ದು ಕೂಡಲೇ ಅದನ್ನು ಇಶಾಕ್ ಎಂಬಾತನಿಗೆ ಹಸ್ತಾಂತರಿಸಿದ್ದು ಭಟ್ಕಳದಲ್ಲಿ ರೈಲು ನಿಧಾನವಾಗಿ ಚಲಿಸುತ್ತಿದ್ದಾಗ ಇಬ್ಬರು ರೈಲಿನಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದು ಇದೇ ವೇಳೆ ರೈಲ್ವೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಬ್ಯಾಗ್ ಕಳೆದುಕೊಂಡಿದ್ದ ಪ್ರಯಾಣಿಕರಾದ ಸತ್ಯಭಾಮಾ ಅವರನ್ನು ಸಂಪರ್ಕಿಸಿದ್ದಾರೆ. ಇನ್ನು ಬಂಧಿತ ಆರೋಪಿ ಇಶಾಕ್ ಮೇಲೆ ಶೋರ್ನೂರು ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಹಿಂದೆಯೇ ಸರಕಳ್ಳತನ ಪ್ರಕರಣ ದಾಖಲಾಗಿತ್ತು.

ಆರೋಪಿಗಳನ್ನು ಭಟ್ಕಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

Comments are closed.