ಕರಾವಳಿ

ಕುದ್ರೋಳಿ ಶ್ರೀ ಕ್ಷೇತ್ರ : ವೈಭವದ ಮಂಗಳೂರು ದಸರಾ ಮಹೋತ್ಸವ ಉದ್ಘಾಟನೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 07: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ ಮಂಗಳೂರು ದಸರಾ ಮಹೋತ್ಸವವನ್ನು ರವಿವಾರ ಸಂಜೆ ಶ್ರೀ ಕ್ಷೇತ್ರ ಕುದ್ರೋಳಿಯ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಶ್ರೀ ಶಾರಾದೆಯ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮಂಗಳೂರು ದಸರಾ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಜನಾರ್ದನ ಪೂಜಾರಿ ಯವರು ನೇತ್ರತ್ವದಲ್ಲಿ ಶ್ರೀ ಶಾರದಾ ಮಾತೆಗೆ ಧಾರ್ಮಿಕ ವಿಧಿಗಳೊಂದಿಗೆ ಪೂಜೆ ಸಲ್ಲಿಸಿ ಉತ್ಸವದ ಧಾರ್ಮಿಕ ಕಾರ್ಯ ಕ್ರಮ ಕ್ಕೆ ಚಾಲನೆ ನೀಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಶ್ರೀದೇವರು ಎಲ್ಲರಿಗೂ ಸನ್ಮಂಗಲವನ್ನು ಉಂಟುಮಾಡಲಿ ಎಂದು ಪೂಜಾರಿಯವರು ಈ ವೇಳೆ ಅವರು ಪ್ರಾರ್ಥಿಸಿದರು.

ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ವರ್ಷಾಂಪ್ರತಿ ಶಿಸ್ತುಬದ್ದವಾಗಿ ಶೃದ್ಧಾ ಭಕ್ತಿಯಿಂದ ನಡೆಯುವ ಮಂಗಳೂರು ದಸರಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್‌ ಆರ್‌. ನ್ಯಾಯವಾದಿ, ಪ್ರಮುಖರಾದ ಮಾಲತಿ ಜನಾರ್ದನ ಪೂಜಾರಿ, ಊರ್ಮಿಳಾ ರಮೇಶ್‌ ಕುಮಾರ್‌, ಹರಿಕೃಷ್ಣ ಬಂಟ್ವಾಳ್‌, ಶೇಖರ ಪೂಜಾರಿ, ರಮಾನಾಥ ಕಾರಂದೂರು, ಡಾ| ಬಿ.ಜಿ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.ದೇವೇಂದ್ರ ಪೂಜಾರಿ ಅವರು ವಂದಿಸಿದರು.

ನಾಳೆ ಶೋಭಾಯಾತ್ರೆಯೊಂದಿಗೆ ಮಂಗಳೂರು ದಸರಾ ಉತ್ಸವಕ್ಕೆ ತೆರೆ:

ಕುದ್ರೋಳಿಯ ನವರಾತ್ರಿಯ ಉತ್ಸವದ ನಡುವೆ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿರುವ ಮಂಗಳೂರು ದಸರಾ ಮಹೋತ್ಸವ ನಾಳೆ ವೈಭವದ ಶೋಭಾಯಾತ್ರೆಯೊಂದಿಗೆ ಮಂಗಳೂರು ದಸರಾ ಉತ್ಸವಕ್ಕೆ ನಾಳೆ ತೆರೆ ಬೀಳಲ್ಲಿದೆ.

ಮಂಗಳೂರು ದಸರಾ’ ಮೆರವಣಿಗೆ ಅ. 8ರಂದು ಸಂಜೆ 4ಕ್ಕೆ ಶ್ರೀ ಕ್ಷೇತ್ರ ಕುದ್ರೋಳಿಯಿಂದ ಆರಂಭವಾಗಲಿದೆ. ಈ ಬಾರಿಯ ವಿಶೇಷವೆಂಬಂತೆ ನವದುರ್ಗೆಯರ ಸಹಿತ ಶಾರದಾ ಮಾತೆಯ ಶೋಭಾಯಾತ್ರೆ ಮೊದಲು ಸಾಗಲಿದ್ದು, ವಿವಿಧ ಸ್ತಬ್ಧಚಿತ್ರಗಳು ಹಿಂಬಾಲಿಸಲಿವೆ.75ಕ್ಕೂ ಅಧಿಕ ಅತ್ಯಾಕರ್ಷಕ ಸ್ತಬ್ಧಚಿತ್ರಗಳು, 100ಕ್ಕೂ ಅಧಿಕ ವೇಷಭೂಷಣಗಳು, ವಾದ್ಯಮೇಳ ತಂಡಗಳು ಭಾಗವಹಿಸಲಿವೆ.

ಕುದ್ರೋಳಿಯಿಂದ ಹೊರಡುವ ಮೆರವಣಿಗೆ ಕಂಬಾÛ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿ.ವಿ.ಎಸ್‌. ವೃತ್ತ, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀ ವೆಂಕಟಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್‌ ಅಳಕೆ ಮೂಲಕ ಮರಳಿ ಬರಲಿದೆ.

Comments are closed.