ಅಂತರಾಷ್ಟ್ರೀಯ

ಮೋದಿ, ಟ್ರಂಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಶಿರಸಿ ಮೂಲದ ಬಾಲಕನ ಫೋಟೋ ವೈರಲ್!

Pinterest LinkedIn Tumblr

ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದಂತೆಯೇ ಕಾರ್ಯಕ್ರಮದಲ್ಲಿ ಬಾಲಕನೋರ್ವ ಡೊನಾಲ್ಡ್ ಟ್ರಂಪ್-ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಿದ ಬಾಲಕ ಡೊನಾಲ್ಡ್ ಟ್ರಂಪ್ ಬಳಿ ಮನವಿ ಮಾಡಿಕೊಂಡು ಟ್ರಂಪ್-ಮೋದಿ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ, ಈ ಸೆಲ್ಫಿ ವೈರಲ್ ಆಗತೊಡಗಿದ್ದು, ಈ ಬಾಲಕ ಕರ್ನಾಟಕದ ಶಿರಸಿ ಮೂಲದವನು ಎಂಬುದು ತಿಳಿದಿದೆ.

ಶಿರಸಿ ಮೂಲದ ಪ್ರಭಾಕರ ಹೆಗಡೆ, ಮೇಧಾ ಹೆಗಡೆ ಎಂಬ ದಂಪತಿಯ ಪುತ್ರ ಸಾತ್ವಿಕ್ ಹೆಗಡೆ ಟ್ರಂಪ್-ಮೋದಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅದೃಷ್ಟವಂತ ಬಾಲಕನಾಗಿದ್ದಾನೆ. ಈತ ಒಂಬತ್ತನೆ ತರಗತಿ ಬಾಲಕನಾಗಿದ್ದು ಹೌಡಿ ಮೋದಿ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದ್ದ. ಬಳಿಕ ವಿಶ್ವನಾಯಕರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಕಾಶ ಪಡೆದಿದ್ದ. ಸದ್ಯ ಈ ಫೋಟೋ ತುಂಬಾನೇವೈರಲ್ ಆಗಿದೆ. ಮನೆ ಮಗನ ಸೆಲ್ಫೀ ವೈರಲ್ ಆದ ಬಗ್ಗೆ ಕುಟುಂಬ ವರ್ಗವೂ ಸಂತಸಪಟ್ಟಿದೆ.

Comments are closed.