ಕರಾವಳಿ

ರಾಜ್ಯದ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ಮಂಗಳೂರಿಗೆ ಕೋಟ, ಉಡುಪಿಗೆ ಬೊಮ್ಮಾಯಿ

Pinterest LinkedIn Tumblr

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಬಿ.ಎಸ್. ಯಡಿಯೂರಪ್ಪ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಹಲವು ಸಚಿವರಿಗೆ ಎರೆಡೆರಡು ಜಿಲ್ಲೆ ಉಸ್ತುವಾರಿ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಉಡುಪಿ ಜಿಲ್ಲಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಹಾವೇರಿ ಜಿಲ್ಲೆಗೆ ಉಸ್ತುವಾರಿಯನ್ನಾಗಿ ಮತ್ತು ಪ್ರಭಾರವಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಲಾಗಿದೆ. ಇನ್ನು ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿಯಾಗಿ ನೇಮಿಸಲಾಗಿದೆ.

ನೂತನ ಉಸ್ತುವಾರಿ ಸಚಿವರ ವಿವರಗಳು-
* ಬಿ.ಎಸ್. ಯಡಿಯೂರಪ್ಪ: ಬೆಂಗಳೂರು ನಗರ ಜಿಲ್ಲೆ
* ಗೋವಿಂದ ಕಾರಜೋಳ: ಬಾಗಲಕೋಟೆ/ಕಲಬುರಗಿ (ಅಧಿಕ ಪ್ರಭಾರ)
*ಡಾ.ಅಶ್ವತ್ಥನಾರಾಯಣ: ರಾಮನಗರ/ಚಿಕ್ಕಬಳ್ಳಾಪುರ (ಅಧಿಕ ಪ್ರಭಾರ)
* ಲಕ್ಷ್ಮಣ ಸವದಿ: ಬಳ್ಳಾರಿ/ಕೊಪ್ಪಳ (ಅಧಿಕ ಪ್ರಭಾರ)
* ಕೆ.ಎಸ್.ಈಶ್ವರಪ್ಪ: ಶಿವಮೊಗ್ಗ /ದಾವಣಗೆರೆ (ಅಧಿಕ ಪ್ರಭಾರ)
* ಆರ್.ಅಶೋಕ್: ಬೆಂಗಳೂರು ಗ್ರಾಮಾಂತರ/ಮಂಡ್ಯ (ಅಧಿಕ ಪ್ರಭಾರ)
* ಜಗದೀಶ್ ಶೆಟ್ಟರ್: ಬೆಳಗಾವಿ,ಹುಬ್ಬಳ್ಳಿ -ಧಾರವಾಡ (ಅಧಿಕ ಪ್ರಭಾರ)
* ಶ್ರೀರಾಮುಲು: ರಾಯಚೂರು/ಚಿತ್ರದುರ್ಗ (ಅಧಿಕ ಪ್ರಭಾರ)
* ಸುರೇಶ್ ಕುಮಾರ್: ಚಾಮರಾಜನಗರ
* ವಿ. ಸೋಮಣ್ಣ – ಮೈಸೂರು, ಮಡಿಕೇರಿ (ಅಧಿಕ ಪ್ರಭಾರ)
* ಸಿ.ಟಿ.ರವಿ: ಚಿಕ್ಕಮಗಳೂರು
* ಬಸವರಾಜ್ ಬೊಮ್ಮಾಯಿ: ಉಡುಪಿ/ಹಾವೇರಿ (ಅಧಿಕ ಪ್ರಭಾರ)
* ಕೋಟ ಶ್ರೀನಿವಾಸ ಪೂಜಾರಿ: ದಕ್ಷಿಣಕನ್ನಡ
* ಜೆ.ಸಿ.ಮಾಧುಸ್ವಾಮಿ: ತುಮಕೂರು/ ಹಾಸನ (ಅಧಿಕ ಪ್ರಭಾರ)
*ಚಂದ್ರಕಾಂತ ಗೌಡ ಚಿನ್ನಪ್ಪಗೌಡ ಪಾಟೀಲ್(ಸಿ.ಸಿ.ಪಾಟೀಲ್): ಗದಗ, ವಿಜಯಪುರ (ಅಧಿಕ ಪ್ರಭಾರ)
* ಎಚ್. ನಾಗೇಶ್: ಕೋಲಾರ
* ಪ್ರಭು ಚೌವ್ಹಾಣ್: ಬೀದರ್/ಯಾದಗಿರಿ (ಅಧಿಕ ಪ್ರಭಾರ)
* ಶಶಿಕಲಾ ಜೊಲ್ಲೆ: ಉತ್ತರ ಕನ್ನಡ

Comments are closed.