(ಸಾಂದರ್ಭಿಕ ಚಿತ್ರ)
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಎಸಿಪಿಯೊಬ್ಬರು ಸೇರಿದಂತೆ ಕೆಲವು ಮಂದಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಆಗಿದ್ದು, ಈ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಅಧಿಕಾರ ಸ್ವೀಕರಿಸಿದ್ದಾರೆ.
ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಶಾಂತಾರಾಮ, ಪಾಂಡೇಶ್ವರ (ಮಂಗಳೂರು ದಕ್ಷಿಣ) ಠಾಣೆಯಲ್ಲಿ ಲೋಕೇಶ್, ಪಣಂಬೂರು ಠಾಣೆಯಲ್ಲಿ ಅಜ್ಮತ್ ಅಲಿ, ಟ್ರಾಫಿಕ್ ಉತ್ತರ ಠಾಣೆಯಲ್ಲಿ ಮೋಹನ್ ಕೊಟ್ಟಾರಿ, ಟಾಫಿಕ್ ಪಶ್ಚಿಮ ಠಾಣೆಯಲ್ಲಿ ಅಮಾನುಲ್ಲಾ, ಮಂಗಳೂರು ಸಿಸಿಆರ್‌ಬಿಯಲ್ಲಿ ಮಾರುತಿ ಜಿ. ನಾಯಕ್ ಅಧಿಕಾರ ಸ್ವೀಕರಿಸಿದ್ದಾರೆ.
ದಕ್ಷಿಣ ಉಪವಿಭಾಗದ ಎಸಿಪಿ ಅಧಿಕಾರ ಸ್ವೀಕಾರ :
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಬೆಂಗಳೂರು ನಗರದ ತಿಮ್ಮಯ್ಯ ಕೋದಂಡರಾಮ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಸಹಾಯಕ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮರಾವ್ ಅವರು ಬಳ್ಳಾರಿ ನಗರ ಠಾಣೆಗೆ ಡಿವೈ ಎಸ್ ಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ನೂತನ ಅಧಿಕಾರ ಸ್ವೀಕರಿಸಿಕೊಂಡಿರುವ ಟಿ. ಕೋದಂಡರಾಮ್ ಇವರು ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಹಲವು ವಷಗಳ ಕಾಲ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿದ್ದಾರೆ.
ಕೋದಂಡರಾಮ್ ಅವರು ಜಿಲ್ಲೆಯ ಕದ್ರಿ , ಉರ್ವ, ಪಣಂಬೂರು, ಕಾವೂರು, ಬಜಪೆ ಠಾಣೆಗಳಲ್ಲಿ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರು ನಗರ, ಮಂಡ್ಯ, ಸಿಸಿಬಿ ಬೆಂಗಳೂರು, ಬ್ಯಾಟರಾಯನಪುರ, ವಿಜಯನಗರ, ಭಯೋತ್ಪಾಧಕ ನಿಗ್ರಹ ದಳ , ಮದ್ದೂರು, ಸಿಐಡಿ ತಂಡಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ.
ಇವರ ಸೇವೆಯನ್ನು ಗುರುತಿಸಿರುವ ರಾಜ್ಯ ಸರಕಾರ ಮುಖ್ಯಮಂತ್ರಿ ಪದಕ ಹಾಗೂ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. ಇಲಾಖೆಯಲ್ಲಿ 26 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಇವರು 13 ವರ್ಷಗಳ ಕಾಲ ಮಂಗಳೂರು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದ್ದರು. ನೂತನ ಅಧಿಕಾರ ಸ್ವೀಕರಿಸಿದ ಅವರು ಕಾನೂನಿಗೆ ಗೌರವ ಕೊಡುವವರನ್ನೂ ನಾವೂ ಗೌರವಿಸುತ್ತೇವೆ. ಕಾನೂನು ಕೈಗೆತ್ತಿಕೊಂಡಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ. ಜನಸಾಮಾನ್ಯರಿಗೆ ರಕ್ಷಣೆ ಹಾಗೂ ಶಾಂತಿ ವಾತಾವರಣ ನಿರ್ಮಿಸಿ ಕೊಡುವುದೇ ನನ್ನ ಜವಾಬ್ದಾರಿ. ಮಾಹಿತಿ ಕೊಟ್ಟ ತಕ್ಷಣ ಸ್ಪಂಧಿಸುತ್ತೇವೆ. ತಪ್ಪಿತಸ್ಥರು ಯಾರೇ ಆದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
Comments are closed.