ಕರ್ನಾಟಕ

ಉತ್ತರ ಪ್ರದೇಶದಲ್ಲಿ ಭೀಕರ ದುರಂತ: ಚರಂಡಿಗೆ ಉರುಳಿದ ಬಸ್, 29ಮಂದಿ ಸಾವು; ಮೈಸೂರು ರಂಗಕರ್ಮಿ ಕೆ. ಮುದ್ದುಕೃಷ್ಣ ದಂಪತಿ ಸಾವು

Pinterest LinkedIn Tumblr

ಆಗ್ರಾ: ಆಗ್ರಾದ ಯಮುನಾ ಎಕ್ಸ್‌ಪ್ರೆಸ್ ಹೈವೇನಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಬಸ್ ಚರಂಡಿಗೆ ಬಿದ್ದು 29 ಜನ ದಾರುಣ ಸಾವಿಗೀಡಾದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಅವಧ್ ಡಿಪೋಗೆ ಸೇರಿದ್ದ ಡಬಲ್ ಡೆಕ್ಕರ್ ಬಸ್ ಖನೌದಿಂದ ನವದೆಹಲಿಗೆ ಹೋಗುತ್ತಿತ್ತು.

ಪ್ರಾರಂಭಿಕ ವರದಿಗಳ ಅನುಸಾರ ಬಸ್ ಚರಂಡಿಗೆ ಬಿದ್ದಾಗ 50 ಪ್ರಯಾಣಿಕರು ಇದರು.ಸದ್ಯ ಪೋಲೀಸರು ಸ್ಥಳಕ್ಕಾಗಮಿಸಿದ್ದು ಬಸ್ ನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆವ ಕಾರ್ಯ ನಡೆದಿದೆ.

ಮುದ್ದುಕೃಷ್ಣ ದಂಪತಿ ಸಾವು
ಅಪಘಾತದಲ್ಲಿ ಮೈಸೂರಿನ ರಂಗಕರ್ಮಿ ಕೆ. ಮುದ್ದು ಕೃಷ್ಣ ದಂಪತಿಗಳು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಲಖನೌ ಸಮೀಪ ಭಾನುವಾರ ನಡೆದಿದ್ದ ಸಂಭವಿಸಿದ್ದ ಅಪಘಾತದಲ್ಲಿ ಮುದ್ದುಕೃಷ್ಣ ಹಾಗೂ ಅವರ ಪತ್ನಿ ಇಂದ್ರಾಣಿ ಗಂಭೀರವಾಗಿ ಗಾಯಗೊಂಡಿದ್ದರು.

ಸೋಮವಾರ ಚಿಕಿತ್ಸೆ ಫಲಿಸದೆ ಇಂದ್ರಾಣಿ ಅಸುನೀಗಿದ್ದರೆ ಚೇತರಿಕೆ ಕಾಣುತ್ತಿದ್ದ ಮುದ್ದುಕೃಷ್ಣ ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತವಾಗಿ ಅಸುನೀಗಿದ್ದಾರೆ. ವಿಪರ್ಯಾಸವೆಂದರೆ ಇಂದು ಇಂದ್ರಾಣಿಯವರ ಜನ್ಮದಿನವಾಗಿದ್ದು ಇಂದೇ ದಂಪತಿಳು ಸಾವಿಗೀಡಾಗಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಸ್ ಅಪಘಾತದಲ್ಲಿ ಮೃತಪಟ್ಟವರ ಬಗೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ಮೃತರ ಕುಟುಂಬಗಳಿಗೆ ಉತ್ತರ ಪ್ರದೇಶ ಸರ್ಕಾರ ತಲಾ ಐದು ಲಕ್ಷ ರು. ಪರಿಹಾರ ಘೋಷಣೆ ಮಾಡಿದೆ.

Comments are closed.