ಕರಾವಳಿ

ಪ್ರಾರ್ಥನೆ ನೆಪದಲ್ಲಿ ಮತಾಂತರ ಆರೋಪ- ಸ್ಥಳೀಯರು, ಹಿಂದೂ ಸಂಘಟನೆಯಿಂದ ಹೋರಾಟದ ಎಚ್ಚರಿಕೆ

Pinterest LinkedIn Tumblr

ಕುಂದಾಪುರ: ಪ್ರಾರ್ಥನೆಯ ನೆಪದಲ್ಲಿ ಮನೆಯೊಂದರಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿದೆಯೆಂದು ಆರೋಪಿಸಿ ಸ್ಥಳಿಯರು ಹಾಗೂ ಹಿಂದೂಪರ ಸಂಘಟನೆಯವರು ಆಕ್ರೋಷ ವ್ಯಕ್ತಪಡಿಸಿದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ ಬೆಲ್ತೂರು ಇಂದಿರಾ ನಗರ ಎಂಬಲ್ಲಿ ನಡೆದಿದೆ.

ಇಲ್ಲಿನ ಮನೆಯೊಂದರಲ್ಲಿ ಭಾನುವಾರ ಹಾಗೂ ಇತರೆ ಕೆಲ ದಿನಗಳಲ್ಲಿ ಪ್ರಾರ್ಥನೆ ನೆಪದಲ್ಲಿ ಇತರ ಕಡೆಗಳಿಂದ ಜನರನ್ನು ಕರೆಯಿಸಿ ಅವರಿಗೆ ಧರ್ಮ ಪ್ರಚಾರ ಮಾಡಿ ಮತಾಂತರ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದ್ದು ಇಂತಹ ಕೇಂದ್ರಗಳು ನಿಲ್ಲಬೇಕೆಂದು ಸ್ಥಳೀಯ ನಿವಾಸಿ ಮಹಿಳೆಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ಆಕ್ರೋಷಿತರ ಬಳಿ ಮಾತನಾಡಿ ಸಮಸ್ಯೆ ಆಲಿಸಿದರು.

ಬಳಿಕ ಜನರು ತಿಳಿಸಿದ ಮನೆಗೆ ತೆರಳಿ ಅಲ್ಲಿಗೆ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಿದರು. ಬಳಿಕ ಜನರೊಂದಿಗೆ ಮಾತನಾಡಿದ ಅವರು, ಸಂಬಂಧಪಟ್ಟವರನ್ನು ಠಾಣೆಗೆ ಕರೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದರು.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹಿಂದೂ ಸಂಘಟನೆ ಮುಖಂಡ ಶ್ರೀಧರ್ ಬಿಜೂರು, ಪ್ರಾರ್ಥನೆ ನೆಪದಲ್ಲಿ ಮುಗ್ದರನ್ನು ಮನೆಗೆ ಕರೆಸಿಕೊಂಡು ಅವರಲ್ಲಿ ಧರ್ಮದ ಬಗ್ಗೆ ತಿಳಿಸಿ ಮತಾಂತರಕ್ಕೆ ಯತ್ನಿಸುವ ವ್ಯವಸ್ಥಿತ ಷಡ್ಯಂತ್ರ ವ್ಯಾಪಕವಾಗಿ ನಡೆಯುತ್ತಿದ್ದು ಈ ಬಗ್ಗೆ ಸಂಬಂದಪಟ್ಟ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು. ಇಂತಹ ಕೇಂದ್ರಗಳನ್ನು ಮುಚ್ಚಬೇಕು. ಇಂತಹ ವ್ಯವಸ್ಥೆಗಳ ಬಗ್ಗೆ ಬೈಂದೂರು ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉಘ್ರ ಹೋರಾಟ ನಡೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಶೋಭಾ ಪುತ್ರನ್, ಮುಖಂಡರಾದ ಸುದೇಶ್ ಶೆಟ್ಟಿ, ಸ್ಥಳೀಯ ಹಲವರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.