ಕರಾವಳಿ

ಕ್ರಿಕೆಟ್ ಬೆಟ್ಟಿಂಗ್ : ಮಂಗಳೂರಿನಲ್ಲಿ ಪ್ರಮುಖ ಬುಕ್ಕಿ ಸೆರೆ – ಲ್ಯಾಪ್‌ಟಾಪ್, ಮೊಬೈಲ್,ನಗದು ವಶ

Pinterest LinkedIn Tumblr

ಮಂಗಳೂರು, ಎಪ್ರಿಲ್.06: ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಬುಕ್ಕಿಯೋರ್ವನನ್ನು ಉರ್ವಾ ಠಾಣಾ ಪೊಲೀಸರು ಬಂಧಿಸಿ ನಗದು ಸಹಿತಾ ರೂ. 36450 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಜೈ ನ್ಯೂ ರೋಡ್‌ನ ಒಲಿವಾ ಅಪಾರ್ಟಮೆಂಟ್ ನಿವಾಸಿ ಇರ್ವಿನ್ ಜೆರಾಲ್ಡ್ ಡಿಸೋಜಾ ಬಂಧಿತ ಆರೋಪಿ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಉರ್ವ ಠಾಣಾ ಸರಹದ್ದಿನ ಬಿಜೈ ನ್ಯೂ ರೋಡ್ 04 ನೇ ತಿರುವು ರಸ್ತೆಯಲ್ಲಿರುವ ಒಲಿವಾ ಅಪಾರ್ಟಮೆಂಟ್ ನ ಪ್ಲಾಟ್ ನಲ್ಲಿ ಆರೋಪಿಯು SPORTS 999,LOTUS BOOK,ಹಾಗೂ BRIZZO SPORTS ಎಂಬ Mobile App ನಲ್ಲಿ ಸನ್ ರೈಸ್ ಹೈದರಾಬಾದ್ ಮತ್ತು ಡಿಲ್ಲಿ ಕ್ರಿಕೇಟರ್ಸ್ ಮಧ್ಯೆ ನಡೆಯುತ್ತಿರುವ ಐ.ಪಿ.ಎಲ್. ಟಿ20 ಪಂದ್ಯಕ್ಕೆ ಸಂಬಂಧಪಟ್ಟು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ದೊರೆತ ಖಚಿತ ವರ್ತಮಾನದಂತೆ ಉರ್ವ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಕ್ರಿಕೇಟ್ ಬೆಟ್ಟಿಂಗ್ ಅಕ್ರಮ ದಂಧೆಗೆ ಉಪಯೋಗಿಸುತ್ತಿದ್ದ ಒಟ್ಟು ಮೂರು ಮೊಬೈಲ್ ಮತ್ತು ಒಂದು ಲ್ಯಾಪ್ ಟಾಪ್ ನ್ನು ಹಾಗೂ ಸಾರ್ಜನಿಕರಿಂದ ಅಕ್ರಮ ಬೆಟ್ಟಿಂಗ್ ದಂಧೆಗೆ ಸಂಗ್ರಹಿಸಿದ್ದ ನಗದು ಹಣ ರೂ. 1450 ಸೇರಿದಂತೆ ಒಟ್ಟು ರೂ. 36450 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಮಾನ್ಯ ಹನುಮಂತರಾಯ ಐ.ಪಿ.ಎಸ್. (L&O) ಮತ್ತು ಶ್ರೀಮತಿ ಉಮಾ ಪ್ರಶಾಂತ್ (Crime & Traffic) ಇವರ ಮಾರ್ಗದರ್ಶನದಂತೆ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸುಧೀರ್ ಹೆಗ್ಡೆ ಇವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಗುರುಪ್ರಸಾದ್.ಎ, ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ವನಜಾಕ್ಷಿ.ಕೆ, ಪ್ರೊಫೆಶನರಿ ಪಿ.ಎಸ್.ಐ ಹರೋನ್ ಅಖ್ತರ್ ಹಾಗೂ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Comments are closed.