ಕರಾವಳಿ

ಕೋಸ್ಟ್ ಗಾರ್ಡ್ ತ್ವರಿತ ಕಾರ್ಯಾಚರಣೆ ; ಸಾಗರ ಮಧ್ಯ ಬೆಂಕಿ ಅವಘಡಕ್ಕೀಡಾಗಿದ್ದ ಹಡಗು ಹಾಗೂ 16 ವಿಜ್ಞಾನಿಗಳ ಸಹಿತಾ 36 ಮಂದಿಯ ರಕ್ಷಣೆ

Pinterest LinkedIn Tumblr

ಮಂಗಳೂರು, ಮಾರ್ಚ್.16:ಮಂಗಳೂರಿನ ನವಮಂಗಳೂರು ಬಂದರು ಸಮೀಪ ಸಾಗರ ಮಧ್ಯದಲ್ಲಿ ಬೆಂಕಿ ಅವಘಡಕ್ಕೀಡಾಗಿದ್ದ ಸಂಶೋಧನಾ ಹಡಗೊಂದನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ತ್ವರಿತ ಕಾರ್ಯಾಚರಣೆ ಮೂಲಕ ರಕ್ಷಿಸಿದ ಘಟನೆ ಕಳೆದ ರಾತ್ರಿ ನಡೆದಿದೆ.

ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ನಡೆಸಿದ ತ್ವರಿತ ಕಾರ್ಯಾಚರಣೆಯಿಂದ ಹಡಗಿನಲ್ಲಿದ್ದ 16 ವಿಜ್ಞಾನಿಗಳು ಸೇರಿದಂತೆ 36 ಮಂದಿಯನ್ನು ರಕ್ಷಿಸಲಾಗಿದೆ.

‘ಸಾಗರ್ ಸಂಪದ’ ಹೆಸರಿನ ಸಾಗರ ಸಂಶೋಧನಾ ಹಡಗು ನಿನ್ನೆ ರಾತ್ರಿ ಬೆಂಕಿ ಅವಘಡಕ್ಕೀಡಾಗಿತ್ತು. 16 ವಿಜ್ಞಾನಿಗಳು ಹಾಗೂ 30 ಸಿಬ್ಬಂದಿಯನ್ನು ಒಳಗೊಂಡಿದ್ದ ಈ ಹಡಗು ಕೊಚ್ಚಿಯಿಂದ ಸಂಶೋಧನಾ ಚಟುವಟಿಕೆಯ ಬಳಿಕ ಮತ್ತೆ ಕೊಚ್ಚಿಗೆ ಹಿಂದಿರುಗುತ್ತಿದ್ದ ವೇಳೆ ಮಂಗಳೂರು ಕಡಲ ತೀರದಿಂದ(ನವಮಂಗಳೂರು ಬಂದರು ಪ್ರದೇಶದಿಂದ) 40 ನಾಟೆಕಲ್ ಮೈಲ್ ದೂರದಲ್ಲಿ ಬೆಂಕಿ ಅವಘಡಕ್ಕೊಳಗಾಗಿದೆ.

ಈ ಬಗ್ಗೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್ ಕರ್ನಾಟಕದ ಜಿಲ್ಲಾ ಮುಖ್ಯ ಕಚೇರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಕೋಸ್ಟ್ ಗಾರ್ಡ್‌ನ ಸುಜಯ್ ಮತ್ತು ವಿಕ್ರಮ್ ಹಡಗು ನೆರವಿಗೆ ಧಾವಿಸಿದೆ. 1:30ರ ಸುಮಾರಿಗೆ ಘಟನಾ ಸ್ಥಳ ತಲುಪಿದ ಸುಜಯ್‌ಮತ್ತು ವಿಕ್ರಮ್ ಹಡಗುಗಳು ಬೆಂಕಿಯನ್ನು ನಂದಿಸುವಲ್ಲಿ ಶ್ರಮಿಸಿದವು.

ಮಂಗಳೂರು ಸಮುದ್ರವ್ಯಾಪ್ತಿಯಲ್ಲಿ ಬೆಂಕಿ ಅವಘಡಕ್ಕೀಡಾಗಿದ್ದ ವಿಜ್ಞಾನಿಗಳನ್ನೊಳಗೊಂಡ ಸಾಗರ ಸಂಶೋಧನಾ ಹಡಗೊಂದನ್ನು ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿ, ಸಾಗರ್ ಸಂಪದ ಹಡಗಿನಲ್ಲಿದ್ದ 16 ವಿಜ್ಞಾನಿಗಳ ಸಹಿತ ಎಲ 30 ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಕರ್ನಾಟಕದ ಕಮಾಂಡರ್ ಎಸ್.ಎಸ್.ದಾಸಿಲ ಅವರು ಪತ್ರಿಕೆಗಳಿಗೆ ಮಾಹಿತಿ ನೀಡಿರುತ್ತಾರೆ.

Comments are closed.