ಕರಾವಳಿ

ಬೆಂಕಿ ಅವಘಡದಲ್ಲಿ ನವ ವಿವಾಹಿತೆ ಸಾವು ಪ್ರಕರಣ: ಮೊಬೈಲ್ ಸ್ಫೋಟವಲ್ಲ, ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ನವ ವಿವಾಹಿತೆಯೊಬ್ಬರು ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಇಗ ಟ್ವಿಸ್ಟ್ ಸಿಕ್ಕಿದೆ. ಅವರ ಸಾವು ಮೊಬೈಲ್ ಸ್ಫೋಟದಿಂದ ಆಗಿಲ್ಲ. ಬದಲಾಗಿ ಅದೊಂದು ಆತ್ಮಹತ್ಯೆ ಎಂದು ತಿಳಿದುಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾದ ನವ ವಿವಾಹಿತೆ ಮಾಬುಕಳ ನಿವಾಸಿ ಅಶ್ವಿನಿ (28) ಎಂಬವರು ತವರು ಮನೆ ಬಚ್ಚಲು ಮನೆಯಲ್ಲಿ ಸೀಮೆ‌ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಅಶ್ವಿನಿ ಸುಮಾರು 5 ವರ್ಷದಿಂದ ಮಣೂರು ಪಡುಕೆರೆ ಕಾಲೇಜ್‌ನಲ್ಲಿ ಖಾಸಗಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಮಾನಸಿಕ ಖಿನ್ನತೆಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾಧಾರಣ ಗುಣಮುಖರಾಗಿ ಕೆಲಸಕ್ಕೆ ಹೋಗಿ ಬರುತ್ತಿದ್ದರು.

2018, ಡಿ.27 ರಂದು ಅಶ್ವಿನಿ ವಿವಾಹ ಮಲ್ಪೆ ಯುವಕನ ಜೊತೆ ನಡೆದಿತ್ತು. ಗಂಡನ ಮನೆಯಿಂದ ಕಾಲೇಜಿಗೆ ಬಂದು ಹೋಗುತ್ತಿದ್ದರು. ಗಂಡನ ಮನೆಯಲ್ಲಿದ್ದಾಗಲೂ 2 ಬಾರಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮಣಿಪಾಲ ಕೆ‌ಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಅಶ್ವಿನಿ ಮೌನಿಯಾದರು. 2019, ಫೆ.14 ರಂದು ತವರು ಮನೆಗೆ ಬಂದಿದ್ದು, ಭಾನುವಾರ ಸಂಜೆ ಸ್ನಾನಗೃಹದಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು.

ತೀವ್ರತರದ ಗಾಯಗೊಂಡ ಅಶ್ವಿನಿ ಅವರ ಮೊದಲು ಮಣಿಪಾಲ ಆಸ್ಪತ್ರೆ, ನಂತರ ಮಂಗಳೂರು ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related News:

ಉಡುಪಿಯ ಮಾಬುಕಳದಲ್ಲಿ ಅಗ್ನಿ ಅವಘಡ: ನವವಿವಾಹಿತೆ ದಾರುಣ ಸಾವು: ಮೊಬೈಲ್ ಸ್ಫೋಟ ಶಂಕೆ

Comments are closed.