ಕರಾವಳಿ

ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸಗಳ ಮಾರಾಟದ ಮೇಲೆ ನಿರ್ಬಂಧ ಹೇರಲು ಆಗ್ರಹ

Pinterest LinkedIn Tumblr

ಮಂಗಳೂರು : ತೀರ್ಥಕ್ಷೇತ್ರಗಳಲ್ಲಿ ಮದ್ಯ-ಮಾಂಸಗಳ ಮಾರಾಟದ ಮೇಲೆ ನಿರ್ಬಂಧ ತರಬೇಕು ಮತ್ತು ಮಂದಿರಗಳ ಸರಕಾರೀಕರ ಣವನ್ನು ತೆಗೆದುಹಾಕಿ ಮಂದಿರವನ್ನು ಪುನಃ ಭಕ್ತರ ವಶಕ್ಕೆ ಒಪ್ಪಿಸಬೇಕು. ಮಾರುತಿಯನ್ನು ಮುಸಲ್ಮಾನ, ಜಾಟ, ಚೀನಿ, ಕ್ರೀಡಾಪಟು ಮುಂತಾದ ಹೆಸರುಗಳಿಂದ ಸಂಬೋಧಿಸುವವರ ಮೇಲೆ ಕಠೋರ ಕಾರ್ಯಾಚರಣೆ ಮಾಡಬೇಕು. ಇದಕ್ಕಾಗಿ ಹಿಂದೂ ಧರ್ಮ, ಧರ್ಮಗ್ರಂಥ, ದೇವರು ಮತ್ತು ಸಂತರ ಅನಾದರವನ್ನು ತಡೆಗಟ್ಟುವ ಕಠೋರ ಕಾನೂನನ್ನು ರಚಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮಂಗಳೂರು ಜಿಲ್ಲ್ಲಾಧಿಕಾರಿ ಕಚೇರಿಯ ಎದುರು ಬೃಹತ್ ರಾಷ್ಟ್ರೀಯ ಹಿಂದೂ ಆಂದೋಲನ ಜರಗಿತು.

ಅಯೋಧ್ಯಾನಗರವು ಕೋಟಿಗಟ್ಟಲೆ ಹಿಂದುಗಳ ಶ್ರದ್ಧಾಸ್ಥಾನವಾಗಿದೆ ಮತ್ತು ಪ್ರಭು ಶ್ರೀರಾಮನ ಜನ್ಮಭೂಮಿಯಾಗಿದೆಯೆನ್ನುವುದು ಐತಿಹಾಸಿಕ ಸತ್ಯವಾಗಿದೆ. ಹಿಂದುಗಳ ಧರ್ಮಗ್ರಂಥಗಳಲ್ಲಿ ಇದರ ಅನೇಕ ಪುರಾವೆಗಳಿವೆ. ನ್ಯಾಯಾಲಯದಲ್ಲಿ ಐತಿಹಾಸಿಕ ಪುರಾವೆಗಳ ಆಧಾರದ ಮೇಲೆ ಇದು ಪುನಃ ಸಿದ್ಧವಾಗಿದೆ ಮತ್ತು 2010 ರಲ್ಲಿ ಅಲಾಹಾಬಾದ ಉಚ್ಚ ನ್ಯಾಯಾಲಯವು ‘ಶ್ರೀರಾಮಜನ್ಮಭೂಮಿಯು ಪ್ರಭು ಶ್ರೀರಾಮನದೇ ಆಗಿದೆ’ ಎಂಬ ಸ್ವೀಕೃತಿಯನ್ನೂ ನೀಡಿದೆ.

ಕಳೆದ ಎಂಟು ವರ್ಷಗಳಿಂದ ಈ ವಿವಾದವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಿಲುಕಿಕೊಂಡಿದೆ. ಹಿಂದೂಗಳು ಶ್ರೀರಾಮಮಂದಿರಕ್ಕಾಗಿ ಇನ್ನೆಷ್ಟು ಪ್ರತೀಕ್ಷೆ ಮಾಡಬೇಕು? ಇದೊಂದು ರೀತಿಯಲ್ಲಿ ಶ್ರೀರಾಮನ ಅನಾದರವೇ ಆಗಿದೆ. ಈ ಸ್ಥಳದಲ್ಲಿ ಶ್ರದ್ಧಾಳುಗಳು ಯಾವುದೇ ರೀತಿಯ ಪೂಜೆ-ಅರ್ಚನೆ ಮಾಡುವ ಹಾಗಿಲ್ಲ. ಹಿಂದೂಬಹುಸಂಖ್ಯಾತ ಭಾರತದಲ್ಲಿ ಶ್ರೀರಾಮಜನ್ಮಭೂಮಿಯಲ್ಲಿ ಹಿಂದುಗಳಿಗೆ ಪೂಜೆಯನ್ನು ಮಾಡುವ ಅಧಿಕಾರವನ್ನು ನೀಡದಿರುವುದು ಲಜ್ಜಾಸ್ಪದವಾಗಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ, ಇವೆರಡೂ ಸ್ಥಳಗಳಲ್ಲಿ ಭಾಜಪದ್ದೇ ಬಹುಮತ ಸರಕಾರವಿದೆ. ಆದುದರಿಂದ ಸಂಸತ್ತಿನಲ್ಲಿ ತಕ್ಷಣ ಕಾನೂನನ್ನು ಮಾಡಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಮಾಡಬೇಕು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯಾನಂತರ 70 ವರ್ಷಗಳಿಂದ ಭಾರತವು ಧರ್ಮನಿರಪೇಕ್ಷ ದೇಶವಾಗಿದೆ, ಎಂದು ಹೇಳುತ್ತ ಮದರಸಾಗಳಲ್ಲಿ ಕುರಾನ ಕಲಿಸಲಾಗುತ್ತದೆ, ಕ್ರೈಸ್ತ ಮಿಶನರಿಗಳ ಕಾನ್ವೆಂಟ್ ವಿದ್ಯಾಲಯಗಳಲ್ಲಿ ಬೈಬಲ್ ಕಲಿಸಲಾಗುತ್ತದೆ ಮತ್ತು ಹಿಂದೂ ವಿದ್ಯಾರ್ಥಿಗಳು ಯಾವ ವಿದ್ಯಾಲಯಗಳಲ್ಲಿ ಓದುವರೋ, ಅಲ್ಲಿ ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ಧರ್ಮಶಿಕ್ಷಣದ ಮೇಲೆ ತಡೆಯನ್ನೊಡ್ಡಲಾಗುತ್ತದೆ. ಆದುದರಿಂದ ಇಂದಿನ ಹಿಂದೂ ಯುವ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಭೋಗವಾದ, ವ್ಯಸನಾಧೀನತೆ, ನೀತಿಹೀನತೆ ಮತ್ತು ವಾಸನಾಂಧತೆಯ ಸುಳಿಯಲ್ಲಿ ಸಿಲುಕಿ ವಾಮಮಾರ್ಗದಲ್ಲಿ ಸಾಗುತ್ತಿದೆ. ಧರ್ಮಶಿಕ್ಷಣದಿಂದ ನೈತಿಕತೆ ನಿರ್ಮಾಣವಾಗುತ್ತದೆ.

ವರ್ತಮಾನದಲ್ಲಿ ಅದು ಸಿಗುತ್ತಿಲ್ಲದಿರುವುದರಿಂದ ಸಮಾಜದಲ್ಲಿ ಕಳ್ಳತನ, ಹತ್ಯೆ, ದರೋಡೆ, ಬಲಾತ್ಕಾರ ಮತ್ತು ಭ್ರಷ್ಟಾಚಾರಗಳಂತಹ ಅಪರಾಧಗಳು ಹೆಚ್ಚಾಗಿವೆ. ಆದುದರಿಂದ ಭಾವಿ ಪೀಳಿಗೆಗೆ ಜ್ಞಾನಿ, ಸಂಸ್ಕಾರಯುಕ್ತ ಮತ್ತು ಚಾರಿತ್ರ್ಯಸಂಪನ್ನರನ್ನಾಗಿ ಮಾಡಲು ಅವರಿಗೆ ರಾಮಾಯಣ, ಮಹಾಭಾರತ ಮುಂತಾದ ಧರ್ಮಗ್ರಂಥಗಳ ಶಿಕ್ಷಣವನ್ನು ನೀಡುವುದು ಅತ್ಯಂತ ಆವಶ್ಯಕವಿದೆ. ಈ ಸಮಯದಲ್ಲಿ ಎಲ್ಲ ವಿದ್ಯಾಲಯ-ಮಹಾವಿದ್ಯಾಲಯಗಳಲ್ಲಿ ಹಿಂದುಗಳಿಗೆ ಪ್ರತಿದಿನ ಅವರ ಧರ್ಮಗ್ರಂಥಗಳ ಶಿಕ್ಷಣವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರಸರಕಾರಕ್ಕೆ ಬೇಡಿಕೆಯನ್ನು ನೀಡಲಾಯಿತು.

ಹಿಂದೂ ಜನಜಾಗೃತಿ ಸಮಿತಿಯ ಉಪೇಂದ್ರ ಆಚಾರ್ಯ, ಪ್ರಮುಖರಾದ ಲೋಕೇಶ್ ಕುತ್ತಾರ್, ಶಶಿಧರ್ ಬಾಳಿಗಾ, ದಯಾನಂದ ವಳಚ್ಚಿಲ್, ಸುರೇಶ ಅತ್ತಾವರ್, ಪ್ರವೀಣ್ ಕುಮಾರ್, ಸೌ ಸುನಂದಾ ಮುಂತಾದವರು ಈ ವೇಳೆ ಮಾತನಾಡಿದರು.

Comments are closed.