ಕರಾವಳಿ

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

Pinterest LinkedIn Tumblr

ಕುಂದಾಪುರ: ಮಣೂರು ರೌಡಿ ಶೀಟರ್ ಹರೀಶ್ ರೆಡ್ಡಿ ಸಹಚರರು ತಲವಾರು ದಾಳಿಗೆ ಶನಿವಾರ ತಡರಾತ್ರಿ ಕೋಟ ಮಣೂರು ಪರಿಸರದಲ್ಲಿ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಉಡುಪಿ ಡಿವೈಎಸ್ ಟಿ. ಜೈಶಂಕರ್ ನೇತ್ರತ್ವದ ಐದು ತಂಡವಾಗಿ ಕಾರ್ಯಾಚರಿಸುತ್ತಿದೆ.

(ಕೊಲೆಯಾದ ಯತೀಶ್ ಹಾಗೂ ಭರತ್ )

ಈ ಬಗ್ಗೆ ಸಣ್ಣಪುಟ್ಟ ಊಹ ಪೋಹಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಪೋಲಿಸ್ ಮಾಹಿತಿ ಪ್ರಕಾರ ಇನ್ನೇರಡು ದಿನಗಳಲ್ಲಿ ಆರೋಪಿಗಳ ಸುಳಿವು ಸಿಗಲಿದೆ ಎಂಬ ಲಭ್ಯವಾಗಿದೆ. ಮೋಬೈಲ್ ನೆಟ್‌ವರ್ಕ್ ಸಹಿತ ಎಲ್ಲಾ ಸಾಧ್ಯತೆಗಳನ್ನು ಗಣನೆಗೆ ತೆಗೆದುಕೊಂಡು ತನಿಖೆ ಮಾಡಲಾಗುತ್ತಿದ್ದು, ಕೊಲೆಗಾರರ ಬಂಧಿಸುವ ವಿಶ್ವಾಸವಿದೆಯೆಂದು ಎಂದು ತನಿಖಾ ತಂಡದ ನೇತೃತ್ವ ವಹಿಸಿದ ಟಿ. ಜೈಶಂಕರ್ ತಿಳಿಸಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತಮ್ಮ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ.

ಯತೀಶ್-ಭರತ್ ಮನೆಗೆ ಹೆಗ್ಡೆ ಭೇಟಿ
ಕೊಲೆಯಾದ ಭರತ್ ಶ್ರೀಯಾನ್ ಹಾಗೂ ಯತೀಶ್ ಕಾಂಚನ್ ಮನೆಗೆ ಮಾಜಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಕೊಲೆ ಗಡುಕರನ್ನು ಪತ್ತೆ ಹಚ್ಚಲು ಪೋಲಿಸ್ ಇಲಾಖೆ ಪ್ರಾಮಾಣಿಕವಾಗಿ ಪ್ರಯತ್ನಿಸಲು ಸಲಹೆ ನೀಡುತ್ತೇನೆ ಎಂದರು.

ಕೋಟ ಬಂದ್… ಪ್ರತಿಭಟನಾ ಕೂಗು
ಯತೀಶ್ ಹಾಗೂ ಭರತ್ ಹತ್ಯೆಯಾಗಿ ಏಳು ದಿನ ಕಳೆದರೂ ಆರೋಪಿಗಳ ಸುಳಿವು ಲಭ್ಯವಾಗಿಲ್ಲ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕೊಲೆಗಾರರ ಬಂಧಿಸದಿದ್ದರೆ, ಹೀಗೆ ಮುಂದುವರಿದರೆ ನಿಮ್ಮ ಮನೆಯ ಮಕ್ಕಳಿಗೂ ಇದೇ ಸ್ಥಿತಿ ಬಂದೊದಗಬಹುದು ಅದಕ್ಕಾಗಿ ಇದೇ ಬರುವ ಫೆ,3 ರಂದು ಜನಹಿತ ರಕ್ಷಣಾ ಸಮಿತಿ ಮೂಲಕ ಸ್ಥಳೀಯ ಸಂಘಸಂಸ್ಥೆಗಳ ನೆರವಿನೊಂದಿಗೆ ಕೋಟ ಬಂದ್ ಹಾಗೂ ಬ್ರಹತ್ ಪ್ರತಿಭಟನೆ ನಡೆಸಲಾಗುವುದೆಂಬ ಪೋಸ್ಟರ್ ಅಂತರ್ಜಾಲದ ವಾಟ್ಸ್‌ಪ್ ಫೇಸ್ಬುಕ್ ಮೂಲಕ ಹರಿದಾಡುತ್ತಿದೆ. ನಡೇಸಲುದ್ದೇಶಿಸಿದ ಪ್ರತಿಭಟನೆಗೆ ಇಪ್ಪತ್ತಕೂ ಅಧಿಕ ವಿವಿಧ ಸಂಘಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದೆ.

ಇದನ್ನೂ ಓದಿರಿ:

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

 

Comments are closed.