ಕರಾವಳಿ

ಉಳ್ಳಾಲ ಸಮೀಪ ಕ್ಯಾಂಟೀನ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Pinterest LinkedIn Tumblr

ಉಳ್ಳಾಲ, ಜನವರಿ.4: ದುಷ್ಕರ್ಮಿಗಳ ತಂಡವೊಂದು ಹೊಟೇಲ್ (ಕ್ಯಾಂಟೀನ್‌)ಗೆಬೆಂಕಿ ಹಚ್ಚಿದ ಘಟನೆ ತೊಕ್ಕೊಟ್ಟು ಸಮೀಪ ಕಾಪಿಕಾಡ್‌ನಲ್ಲಿ ಗುರುವಾರ ರಾತ್ರಿ ನಡೆದಿದ್ದು,ಘಟನೆಯಿಂದ ಕ್ಯಾಂಟೀನ್ ಭಾಗಶ: ಹಾನಿಗೀಡಾಗಿದೆ.

ಉಳ್ಳಾಲ ಹಳೆಕೋಟೆಯ ಅಬೀದ್ ಎಂಬವರಿಗೆ ಸೇರಿದ ಕಾಪಿಕಾಡಿನಲ್ಲಿರುವ ಕ್ಯಾಂಟಿನ್‌ನಲ್ಲಿ ಘಟನೆ ನಡೆದಿದ್ದು, ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಬಳಿಕ ಅದರ ಮಾಲಕ ಹಣ ಕೇಳಿದಕ್ಕೆ ಕುಂಪಲ ನಿವಾಸಿ ರವೂಫ್ ಹಾಗೂ ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕುಂಪಲ ನಿವಾಸಿ ರವೂಫ್ ಮತ್ತು ಆತನ ತಂಡ ನಿನ್ನೆ ರಾತ್ರಿ ಕ್ಯಾಂಟೀನ್‌ಗೆ ಆಗಮಿಸಿ ಹೊಟ್ಟೆ ತುಂಬ ಊಟ ಮಾಡಿದ್ದರೆನ್ನಲಾಗಿದೆ. ಬಳಿಕ ಊಟದ ಬಿಲ್ ಕೊಡದೆ ಜಾಗ ಖಾಲಿ ಮಾಡಲು ಮುಂದಾದರು ಎನ್ನಲಾಗಿದೆ. ಈ ಸಂದರ್ಭ ಕ್ಯಾಂಟೀನ್ ಮಾಲಕ ಹಣ ನೀಡುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ತಂಡ ಕ್ಯಾಂಟೀನ್‌ಗೆ ಬೆಂಕಿ ಹಚ್ಚಿದೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.