ಕರಾವಳಿ

ಶಬರಿಮಲೆ ವಿವಾದದ ಬೆನ್ನಲ್ಲೇ ಬಂಟ್ವಾಳದಲ್ಲಿ ಸಿಪಿಐ ಕಚೇರಿಗೆ ಬೆಂಕಿ

Pinterest LinkedIn Tumblr

ಬಂಟ್ವಾಳ, ಜನವರಿ.03:ಶಬರಿಮಲೆ ಮಹಿಳಾ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲೂ ಆಕ್ರೋಷ ವ್ಯಕ್ತವಾಗಿದ್ದು, ಇದೇ ವೇಳೆ ಸಿಪಿಐ ಬಂಟ್ವಾಳ ಸಮಿತಿಯ ಕಚೇರಿಗೆ ಬೆಂಕಿ ಹಚ್ಚಿರುವ ಘಟನೆ ಬುಧವಾರ ರಾತ್ರಿ ನಡೆದಿದ್ದು, ಶುಕ್ರವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ‌.

ಬಿ.ಸಿ.ರೋಡಿನ ಬೈಪಾಸ್ ನ ನಾಲ್ಕು ಮಾರ್ಗದ ಬಳಿ ಕಾರ್ಯಾಚರಿಸುತ್ತಿರುವ ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಈ ಘಟನೆ ಇಂದು ಬೆಳಕಿಗೆ ಬಂದಿದೆ.

ಘಟನೆಯಿಂದ ಕಚೇರಿಯೊಳಗಿದ್ದ ಪಕ್ಷಕ್ಕೆ ಸಂಬಂಧಪಟ್ಟ ಕಡತಗಳು ಹಾಗೂ ಮುಖ್ಯವಾದ ಅರ್ಜಿಗಳು, ವಿದ್ಯಾರ್ಥಿ ವೇತನದ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆಯಿಂದ ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ವಿರುದ್ಧ ವ್ಯಾಪಕ ಆಕ್ರೋಷ ವ್ಯಕ್ತವಾಗಿರುವ ಬೆನ್ನಲೇ ಈ ಘರ್ಷಣೆ ದಕ್ಷಿಣ ಕನ್ನಡ ಜಿಲ್ಲೆಗೂ ವ್ಯಾಪಿಸಿರುವ ಶಂಕೆ ಮೂಡಿದೆ.

Comments are closed.