ಕರಾವಳಿ

ಲೇಡಿಹಿಲ್ ಬಳಿ ಮನಪಾ ಓವರ್ ಹೆಡ್ ಟ್ಯಾಂಕ್‌ನಲ್ಲಿ ನೀರು ಸೋರಿಕೆ : ವೀಡಿಯೊ ವೈರಲ್

Pinterest LinkedIn Tumblr

 ಮಂಗಳೂರು: ನಗರದ ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ 15 ಲಕ್ಷ ಲೀ. ಸಾಮರ್ಥ್ಯವುಳ್ಳ ನೀರಿನ ಓವರ್ ಹೆಡ್ ಟ್ಯಾಂಕ್‌ ತುಂಬಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೀರು ಸೋರಿಕೆಯಾಗಿ ರಸ್ತೆ ಪಾಲಾದ ಘಟನೆ ರವಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಸಂಭವಿಸಿದ್ದು, ಟ್ಯಾಂಕ್​ನಿಂದ ನೀರು ಕೆಳಗೆಬಿಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿತ್ರ ಹಾಗೂ ವೀಡಿಯೊ : ಸತೀಶ್ ಕಾಪಿಕಾಡ್

ಈ ಬಗ್ಗೆ ಸಂಬಂಧ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಓವರ್ ಹೆಡ್ ಟ್ಯಾಂಕ್‌ನ ಮೇಲ್ಭಾಗದ ಬಾಲ್ ಮುರಿದಿದ್ದು,ಈ ಹಿನ್ನೆಲೆಯಲ್ಲಿ ನೀರು ತುಂಬಿದಾಗ ಸೋರಿಕೆ ಆಗುತ್ತಿದೆ. ಸೋಮವಾರ ನೀರನ್ನು ಖಾಲಿ ಮಾಡಿ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಾಲ್ ಕಟ್ ಆಗಿರುವುದರಿಂದ ದುರಸ್ತಿ ಸಂದರ್ಭ ಟ್ಯಾಂಕ್‌ನಲ್ಲಿ ನೀರು ತುಂಬಿಸುವಂತಿಲ್ಲ. ಮೊದಲಿಗೆ ಟ್ಯಾಂಕ್ ನಲ್ಲಿರುವ ಅಷ್ಟು ನೀರನ್ನು ಖಾಲಿ ಮಾಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಈ ವೇಳೆ ಆಸು ಪಾಸಿನ ಮೂರು ವಾರ್ಡ್‌ಗಳಿಗೆ ನಳ್ಳಿ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಲೇಡಿಹಿಲ್‌ನಲ್ಲಿರುವ ಈಜುಕೊಳದ ಸಮೀಪವಿರುವ ಮಹಾನಗರ ಪಾಲಿಕೆಯ 15 ಲಕ್ಷ ಲೀ. ಸಾಮರ್ಥ್ಯವುಳ್ಳ ಈ ನೀರಿನ ಟ್ಯಾಂಕ್‌ನಿಂದ ಮಂಗಳೂರಿನ ಲೇಡಿಹಿಲ್, ಮಣ್ಣಗುಡ್ಡ, ಉರ್ವಾ, ಸೇರಿದಂತೆ ಸುತ್ತಮತ್ತಲಿಗೆ ನೀರು ಪೂರೈಕೆಯಾಗುತ್ತಿದ್ದು, ಇದೀಗ ಈ ಸಮಸ್ಯೆಯಿಂದಾಗಿ ಈ ಪರಿಸರದ ಜನತೆಗೆ ನೀರಿನ ಅಡಚಣೆ ಉಂಟಾಗಲಿದೆ.

Comments are closed.