ಕರಾವಳಿ

ಮೂಡುಬೆಳ್ಳೆ ರಸ್ತೆ ಅಪಘಾತ ಪ್ರಕರಣ:1.15 ಕೋಟಿ ಪರಿಹಾರ ನೀಡಲು ವಿಮಾ ಕಂಪೆನಿಗೆ ಆದೇಶ

Pinterest LinkedIn Tumblr

ಉಡುಪಿ: ಕಳೆದೆರಡು ವರ್ಷಗಳ ಹಿಂದೆ ಮೂಡುಬೆಳ್ಳೆಯಲ್ಲಿ ಟಿಪ್ಪರ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ 1.15 ಕೋಟಿ ಪರಿಹಾರ ನೀಡುವಂತೆ ವಿಮಾ ಕಂಪೆನಿಗೆ ಉಡುಪಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರು (ಹಿರಿಯ ವಿಭಾಗ) ಆದೇಶ ನೀಡಿದ್ದಾರೆ.

2016ರ ಆ.2ರಂದು ಮೂಡುಬೆಳ್ಳೆ ಗಣಪನಕಟ್ಟೆಯಲ್ಲಿ ಜಾನ್ಸನ್‌ ಮೈಕಲ್‌ ಡಿ’ಸೋಜಾ ಅವರು ಬೈಕಿನಲ್ಲಿ ಹೋಗುತ್ತಿದ್ದಾಗ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಟಿಪ್ಪರ್‌ ಢಿಕ್ಕಿ ಹೊಡೆದು ಅವರು ಮೃತಪಟ್ಟಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜಾನ್ಸನ್ ಅಪಘಾತ ನಡೆಯುವ ಮೂರು ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದರು.

ಆ ಬಗ್ಗೆ ಪರಿಹಾರ ಕೋರಿ ಉಡುಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯವು 1,15,96,800 ರೂ. ಹಾಗೂ ಶೇ. 6.1 ಬಡ್ಡಿ ಮತ್ತು ಖರ್ಚು ನೀಡುವಂತೆ ವಿಮಾ ಕಂಪೆನಿಗೆ ಆದೇಶಿಸಿದೆ. ಅರ್ಜಿದಾರರ ಪರವಾಗಿ ಅಲೆವೂರು ಪ್ರೇಮರಾಜ್‌ ಕಿಣಿ ವಾದಿಸಿದ್ದರು.

ಇದನ್ನೂ ಓದಿರಿ:

ಉಡುಪಿ: ರಜೆಗೆಂದು ದುಬೈನಿಂದ ಊರಿಗೆ ಬಂದ ಜಾನ್ಸನ್ ಅಪಘಾತದಲ್ಲಿ ದಾರುಣ ಸಾವು

Comments are closed.