ಕರಾವಳಿ

ಕರಾವಳಿಯಲ್ಲಿ ಅಫೀಮು, ಡ್ರಗ್ಸ್ ಸಕ್ರಿಯವಾಗಿರುವುದೇ ಅತ್ಯಾಚಾರ ಪ್ರಕರಣಕ್ಕೆ ಕಾರಣ : ಸಂಸದೆ ಶೋಭಾ ಕರಂದ್ಲಾಜೆ ಆರೋಪ

Pinterest LinkedIn Tumblr

ಮಂಗಳೂರು, ಡಿಸೆಂಬರ್ 03: ಕರಾವಳಿಯಲ್ಲಿ ಅಫೀಮು ಮಾರಾಟ ಜಾಲ ಸಕ್ರಿಯವಾಗಿರುವುದೇ ಮಂಗಳೂರಿನ ತೋಟ ಬೆಂಗ್ರೆ ಬೀಚ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಅಫೀಮು, ಡ್ರಗ್ಸ್ ನಿಂದ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಈ ಅತ್ಯಾಚಾರ ಘಟನೆಯನ್ನು ತಡೆಗಟ್ಟುವಲ್ಲಿ ಮಂಗಳೂರು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ನಾನು ಘಟನೆಯ ಸಂತ್ರಸ್ತೆಯ ಜೊತೆ ಮಾತನಾಡಿ ಬಂದಿದ್ದೇನೆ. ಆರೋಪಿಗಳು ಭಯಾನಕವಾಗಿ ಕೃತ್ಯ ಎಸಗಿದ್ದಾರೆ. ಕೃತ್ಯ ಎಸಗಿದ ಆರೋಪಿಗಳಿಗೆ ಹಾಗೂ ಘಟನೆಯ ತನಿಖೆ ನಡೆಸಲು ನಿರ್ಲಕ್ಷ್ಯ ತೋರಿದ ಪೊಲೀಸರಿಗೆ ಕಠಿಣ ಶಿಕ್ಷೆಯಾಗಬೇಕು. ಪೊಲೀಸರು ಅಪರಾಧ ಜಾಲಗಳ ಮೂಲವನ್ನು ಪತ್ತೆ ಮಾಡಬೇಕು ಎಂದು ಹೇಳಿದರು.

ತೋಟ ಬೆಂಗ್ರೆ ರೇಪ್ ಪ್ರಕರಣದಲ್ಲಿ ಅಪ್ರಾಪ್ತರಿಗೂ ಶಿಕ್ಷೆಯಾಗಬೇಕು.ಅತ್ಯಾಚಾರ ಮಾಡಿದ ಅಪ್ರಾಪ್ತರು ಬಾಲಕರಾಗಲ್ಲ. ಅವರಿಗೂ ಕಾನೂನಿನನ್ವಯ ಶಿಕ್ಷೆಯಾಗಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧಿಗಳಿಗೆ ಕಾನೂನು, ಶಿಕ್ಷೆಯ ಭಯವಿಲ್ಲ ಎಂದು ಕಿಡಿಕಾರಿದರು.

ಕರಾವಳಿಯಲ್ಲಿ ಅಫೀಮು ಮಾರಾಟ ಜಾಲ ಸಕ್ರಿಯವಾಗಿದ್ದು, ಈ ಮಾದಕ ವಸ್ತುಗಳ ಜಾಲವನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ. ಪೊಲೀಸರಿಗೆ ಇಚ್ಛಾ ಶಕ್ತಿಯ ಕೊರತೆ ಇದೆ. ಅವರು ಬೀಚ್ ಗಳಲ್ಲಿ, ಶಾಲಾ ಕಾಲೇಜು ಪರಿಸರದಲ್ಲಿ ಗಸ್ತು ತಿರುಗುತ್ತಿಲ್ಲ ಈ ವಿಷಯದ ಬಗ್ಗೆ ಡಿಜಿಪಿಯವರ ಗಮನಕ್ಕೂ ತರುತ್ತೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Comments are closed.