ಕರಾವಳಿ

ಸಲಿಂಗಕಾಮಿ ಪತ್ರಕರ್ತನ ಮೇಲೆ ಪೋಕ್ಸೋ ಕಾಯ್ದೆಯಡಿ 21 ಪ್ರಕರಣ ದಾಖಲು!

Pinterest LinkedIn Tumblr

ಕುಂದಾಪುರ: ಅಪ್ರಾಪ್ತ ಶಾಲಾ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪತ್ರಕರ್ತನ ವಿರುದ್ಧ ಪೊಕ್ಸೋ ಕಾಯಿದೆಯಡಿಯಲ್ಲಿ ಒಟ್ಟು 21 ದೂರು ವಿವಿಧ ಠಾಣೆಯಲ್ಲಿ ದಾಖಲಾಗಿದೆ. ಭಾನುವಾರ ಗಂಗೊಳ್ಳಿ ಠಾಣೆಯಲ್ಲಿ ಎರಡು ಹಾಗೂ ಕೊಲ್ಲೂರು ಠಾಣೆಯ ಒಂದು ದೂರು ದಾಖಲಾಗಿದ್ದು, ಬೈಂದೂರು ಠಾಣೆಯಲ್ಲಿ ಹದಿನಾರು, ಕೊಲ್ಲೂರು ಠಾಣೆಯಲ್ಲಿ ಒಂದು ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಬೈಂದೂರು ಠಾಣೆಯಲ್ಲಿ ಅತೀ ಹೆಚ್ಚು 16 ಪ್ರಕರಣ ದಾಖಲಾಗಿದೆ. ಇದೂವರೆಗೆ 21 ಪ್ರಕರಣ ದಾಖಲಾಗಿದೆ.

ಕುಂದಾಪುರ ತಾಲೂಕು ಗಂಗೊಳ್ಳಿ ಠಾಣೆ, ಬೈಂದೂರು ಠಾಣೆ, ಕೊಲ್ಲೂರು ಠಾಣೆ ಹಾಗೂ ಕಂಡ್ಲೂರು ಠಾಣೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಶಾಲೆ ಸಂತ್ರಸ್ಥ ಬಾಲಕರು ದೂರು ನೀಡಿದ್ದು, ಇನ್ನಷ್ಟು ದೂರುಗಳು ದಾಖಲಾಗುವ ಸಂಭವವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯ ಚಂದ್ರ ಕೆ.ಹೆಮ್ಮಾಡಿ ಮೂರು ದಿನ ಪೊಲೀಸ್ ಕಷ್ಟಡಿಗೆ ಒಪ್ಪಿಸಿದ ಅವಧಿ ಮುಗಿಯುತ್ತಿದ್ದು (ಇಂದು) ಸೋಮವಾರ ಪೊಲೀಸರು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಬೈಂದೂರು ಸಮೀಪದ ಶಾಲೆಯೊಂದರೆ ಬಾಲಕನ ಮೇಲೆ ನಡೆಸಿದ ದೌರ್ಜನ್ಯದ ನಂತರ ಪತ್ರಕರ್ತನ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿತ್ತು. ಚಂದ್ರ ಕೆ.ಹೆಮ್ಮಾಡಿ ಬೈಂದೂರು ಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡುವ ಜತೆ ಸಂಗೀತ ಹೇಳಿಕೊಡುವ ನೆವದಲ್ಲಿ ಬಾಲಕರ ದುರುಪಯೋಗ ಮಾಡಿಕೊಳ್ಳುತ್ತಿದ್ದ ಎನ್ನಲಾಗುತ್ತಿದೆ.

Comments are closed.