ಕರಾವಳಿ

ಕದ್ರಿ ಪಾರ್ಕ್ : ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನ

Pinterest LinkedIn Tumblr

ಮಂಗಳೂರು, ನವೆಂಬರ್.27: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ನಗರದ ಕದ್ರಿ ಪಾರ್ಕ್‌ನಲ್ಲಿ ನಡೆದಿದೆ.

ಆತ್ಮಹತ್ಯೆಗೆತ್ನಿಸಿದ ಯುವಜೋಡಿಯನ್ನುಕಾಸರಗೋಡು ಜಿಲ್ಲೆ ಅಡೂರಿನ ಹರ್ಷಿತ್ ಕುಮಾರ್ (23) ಮತ್ತು ಯುವಕನ ಜೊತೆ ಉದ್ಯೋಗ ಮಾಡುತ್ತಿರುವ ಯುವತಿ ಅಮೃತ (18) ಎಂದು ಗುರುತಿಸಲಾಗಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನೀಷಿಯನ್‌ ಆಗಿರುವ ಕಾಸರಗೋಡು ಜಿಲ್ಲೆ ಅಡೂರಿನ ಹರ್ಷಿತ್‌ ಕುಮಾರ್‌ ಮತ್ತು ಅದೇ ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನೀಷಿಯನ್‌ ವಿಭಾಗದಲ್ಲಿ ಇಂಟರ್ನ್ಶಿಪ್‌ ಮಾಡುತ್ತಿದ್ದ ಅಮೃತ ಸೋಮವಾರ ಸಂಜೆ ವೇಳೆ ಕದ್ರಿ ಪಾರ್ಕಿಗೆ ಬಂದು ಕೆಲಕಾಲ ಪಾರ್ಕ್‌ನಲ್ಲಿ ಸುತ್ತಾಡಿದ್ದಾರೆ. ಬಳಿಕ ಮೂಲೆಯಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತು ಇಬ್ಬರು ಸೇರಿ ವಿಷ ಸೇವಿಸಿದ್ದಾರೆ.

ವಾಕಿಂಗ್‌ ಮಾಡುತ್ತಿದ್ದ ಜನರು ಈ ಜೋಡಿ ಕುಳಿತಲ್ಲಿಯೇ ಕುಸಿದು ಬಿದ್ದ ಸ್ಥಿತಿಯಲ್ಲಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿ, ಬಳಿಕ ಪ್ರೇಮಿಗಳಿಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಬಳಿಯಲ್ಲಿದ್ದ ಬ್ಯಾಗಿನಿಂದ ಸಿಕ್ಕಿದ ಗುರುತು ಚೀಟಿಯ ಆಧಾರದಲ್ಲಿ ಹೆಸರು ಮತ್ತು ವಿಳಾಸವನ್ನು ಪತ್ತೆ ಹಚ್ಚಲಾಗಿದೆ.

ಈ ಕುರಿತು ಕದ್ರಿ ಪೊಲೀಸರು ಆಸ್ಪತ್ರೆಗೆ ತೆರಳಿ, ಪರಿಶೀಲನೆ ನಡೆಸಿದ್ದು,ಬಳಿಕ ಪೊಲೀಸರು ಹೆತ್ತವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

Comments are closed.