ಕರಾವಳಿ

‘ಪತಂಜಲಿ’ ಹೆಸರಿನಲ್ಲಿ ಕುಂದಾಪುರದ ಮಹಿಳೆಗೆ ಬರೋಬ್ಬರಿ 7.75 ಲಕ್ಷ ಪಂಗನಾಮ!

Pinterest LinkedIn Tumblr

ಉಡುಪಿ: ಪತಂಜಲಿ ಆಯುರ್ವೇದ ಚಿಕಿತ್ಸಾಲಯದ ವ್ಯವಹಾರದ ಹೆಸರಿನಲ್ಲಿ ಉಡುಪಿ ಜಿಲ್ಲೆ ಕುಂದಾಪುರದ ಮಹಿಳೆಯೋರ್ವರು ಲಕ್ಷಲಕ್ಷ ಉಂಡೇನಾಮ ಹಾಕಿಸಿಕೊಂಡ ಘಟನೆ ನಡೆದಿದೆ.

ಮೂಲತಃ ಕುಂದಾಪುರದ ಕೋಟೇಶ್ವರದವರಾದ ವಾಸುದೇವ ಹೊಳ್ಳ ಎನ್ನುವರ ಪತ್ನಿ ಅನುರಾಧ ಹೊಳ್ಳ (39) ಮೋಸಹೋದವರು. ಇವರು ಪತಂಜಲಿ ಚಿಕಿತ್ಸಾಲಯದ ಉದ್ದೇಶಕ್ಕಾಗಿ ವ್ಯವಹಾರ ನಿಟ್ಟಿನಲ್ಲಿ ಆ.9 ರಂದು ವೆಬ್ ಸೈಟ್ ನಲ್ಲಿ ಆನ್ ಲೈನ್ ಮುಖೇನ ಪತಂಜಲಿ ಚಿಕಿತ್ಸಾಲಯಕ್ಕೆ ದಾಖಲಾತಿ ನೊಂದಣಿ ಮಾಡಿದ್ದರು. 2 ದಿನಗಳ ನಂತರ ದೂರವಾಣಿ ಸಂಖ್ಯೆಗಳಿಂದ ಕರೆ ಬಂದು ವ್ಯವಹಾರದ ಮುಂದಿನ ಹಂತಕ್ಕೆ ತನ್ನ ಆಧಾರ್ ಕಾರ್ಡ, ಪಾನ್ ಕಾರ್ಡ, ಚುನಾವಣಾ ಗುರುತಿನ ಕಾರ್ಡು, ಬಾವಚಿತ್ರ ಇದರ ಪ್ರತಿಯನ್ನು ಸ್ಕ್ಯಾನ್ ಮಾಡಿ ವಾಟ್ಸ್ ಅಫ್ ಮುಖಾಂತರ ಕಳುಹಿಸಲು ತಿಳಿಸಿದ್ದು ಅದರಂತೆಯೇ ದಾಖಲಾತಿಗಳನ್ನು ಅವರಿಗೆ ಕಳುಹಿಸಿದ್ದು, ಆ ನಂತರ ಆ.13ರಂದು ದೂರವಾಣಿ ಮುಖಾಂತರ ಕರೆ ಮಾಡಿ ವ್ಯವಹಾರದ ನೊಂದಣಿಗಾಗಿ 50,000 ರೂಪಾಯಿಯನ್ನು ಪತಂಜಲಿ ಆರ್ಯುವೇದ ಲಿಮಿಟೆಡ್‌ನ ಪಂಜಾಬ್ ನ್ಯಾಶನಲ್ ಬ್ಯಾಂಕ್, ಹರಿದ್ವಾರ ಉತ್ತರಖಂಡ ಶಾಖೆಯ ಖಾತೆಗೆ ಪಾವತಿ ಮಾಡಬೇಕು ಎಂಬುದಾಗಿ ತಿಳಿಸಿದ್ದರು. ಅನುರಾಧ ಹೊಳ್ಳ ಇವರು ಆ ಮೊತ್ತವನ್ನು ಆ.23ರಂದು ಕಾರ್ಪೋರೇಷನ್ ಬ್ಯಾಂಕ್, ಕುಂದಾಪುರದ ವಡೇರಹೋಬಳಿ ಶಾಖೆಯಿಂದ ಜಮಾ ಮಾಡಿದ್ದು, ಆ ಬಳಿಕ ದಿನಾಂಕ ಸೆ.1ರಂದು ಕರೆ ಮಾಡಿ ಸೆಕ್ಯೂರಿಟಿ ಡಿಪಾಸೆಟ್ ಆಗಿ ರೂಪಾಯಿ 2,30,000/- ಹಣವನ್ನು ಕಳುಹಿಸುವಂತೆ ತಿಳಿಸಿದ್ದರು. ಅದರಂತೆ ಆ ಮೊತ್ತವನ್ನು ಪತಂಜಲಿ ಆರ್ಯುವೇದ ಲಿಮಿಟೆಡ್‌ನ ಪಂಜಾಬ್ ನ್ಯಾಶನಲ್ ಬ್ಯಾಂಕ್, ಹರಿದ್ವಾರ ಉತ್ತರಖಂಡ ಶಾಖೆಯ ಖಾತೆಗೆ ಕರ್ನಾಟಕ ಬ್ಯಾಂಕ್, ಕುಂಭಾಶಿ ಶಾಖೆಯಿಂದ ಜಮಾ ಮಾಡಿದ್ದು, ನಂತರ ಕರೆ ಬಂದು ನಿಮ್ಮ ವ್ಯವಹಾರ ಪ್ರಗತಿಯಲ್ಲಿದೆ ಎಂಬುದಾಗಿ ತಿಳಿಸಿದ್ದರು.

ಬಳಿಕ ಸೆ.12ರಂದು ಮತ್ತೆ ಅನುರಾಧ ಹೊಳ್ಳ ರವರಿಗೆ ಕರೆ ಮಾಡಿ ಅರ್ಯುವೇದ ಸಾಮಾನು ಖರೀದಿಗಾಗಿ ರೂಪಾಯಿ 2,50,000/- ವನ್ನು ಪಾವತಿ ಮಾಡುವಂತೆ ತಿಳಿಸಿದ್ದು, ಅದರಂತೆ ಪತಂಜಲಿ ಆರ್ಯುವೇದ ಲಿಮಿಟೆಡ್‌ನ ಪಂಜಾಬ್ ನ್ಯಾಶನಲ್ ಬ್ಯಾಂಕ್, ಹರಿದ್ವಾರ ಉತ್ತರಖಂಡ ಶಾಖೆಯ ಖಾತೆಗೆ ಕರ್ನಾಟಕ ಬ್ಯಾಂಕ್, ಕುಂಭಾಶಿ ಶಾಖೆಯಿಂದ ಜಮಾ ಮಾಡಿದ್ದು, ದಿನಾಂಕ 15/10/2018 ರಂದು ಯೋಗ ತರಭೇತಿ ಸೆಕ್ಯೂರಿಟಿ ಡಿಪಾಸಿಟ್ ಆಗಿ ರೂಪಾಯಿ 1,10,000/- ರೂಪಾಯಿ ಹಣವನ್ನು ಪತಂಜಲಿ ಅರ್ಯುವೇದ ಲಿಮಿಟೆಡ್ ಐಸಿಐಸಿಐ ಬ್ಯಾಂಕ್, ಗೌತಮ ಬುದ್ದ ನಗರದ ಶಾಖೆಯ ಪಾವತಿಸುವಂತೆ ತಿಳಿಸಿದ್ದು, ಅದರಂತೆ ನಾನು ಸದ್ರಿ ಖಾತೆಗೆ ಕರ್ನಾಟಕ ಬ್ಯಾಂಕ್, ಕುಂಭಾಶಿ ಶಾಖೆಯಿಂದ ಜಮಾ ಮಾಡಿದ್ದು,ನಂತರ ದಿನಾಂಕ 26/10/2018 ರಂದು ಪುನಃ ಕರೆ ಮಾಡಿ ಸಾಮಾನುಗಳ ಬಿಲ್ ಆಗಿದ್ದು, ವ್ಯಾಟ್ ತೆರಿಗೆ ಮೊತ್ತ ರೂಪಾಯಿ 80,000/- ಪಾವತಿಸುವಂತೆ ತಿಳಿಸಿದ್ದು, ಅದರಂತೆ ಪತಂಜಲಿ ಅರ್ಯುವೇದ ಲಿಮಿಟೆಡ್ ನ ಅಲಹಬಾದ್ ಬ್ಯಾಂಕ್ ಹರಿದ್ವಾರ್ ಉತ್ತರ ಖಾಂಡ ಶಾಖೆಯ ಖಾತೆಗೆ ನೇದಕ್ಕೆ ಅದರಂತೆ ಇವರು ಸದ್ರಿ ಖಾತೆಗೆ ಕರ್ನಾಟಕ ಬ್ಯಾಂಕ್, ಕುಂಭಾಶಿ ಶಾಖೆಯಿಂದ ಜಮಾ ಮಾಡಿದ್ದು, ನಂತರ ದಿನಾಂಕ 30/10/2018 ರಂದು ಕರೆ ಮಾಡಿ ಸಾಮಾನು ಲಾರಿಯನ್ನು ತೆರಿಗೆ ಅಧಿಕಾರಿಗಳು ಹಿಡಿದಿದ್ದು, ದಂಡ ವಿಧಿಸಿರುವುದಾಗಿ ತಿಳಿಸಿದ್ದು ಈ ಬಗ್ಗೆ 55,000/- ರೂಪಾಯಿ ಹಣವನ್ನು ಪಾವತಿಸುವಂತೆ ತಿಳಿಸಿದ್ದು, ಆ ಮೊತ್ತವನ್ನು ಕರ್ನಾಟಕ ಬ್ಯಾಂಕ್ ನ ಕುಂಭಾಶಿಯ ಶಾಖೆಯಿಂದ ಜಮಾ ಮಾಡಿದ್ದರು.

ಇದೆಲ್ಲದರ ತರುವಾಯ ಮಾಹಿತಿ ಕೇಳುವ ಸಲುವಾಗಿ ತನಗೆ ಕಂಪೆನಿ ಹೆಸರಿನಲ್ಲಿ ಕರೆ ಮಾಡಿದ್ದ ದೂರವಾಣಿ ನಂಬ್ರಗಳಿಗೆ ಕರೆ ಮಾಡಿದ್ದಲ್ಲಿ ಎಲ್ಲಾ ದೂರವಣಿಗಳು ಸ್ತಬ್ಧಗೊಂಡಿದ್ದು, ಯಾವುದೇ ಸ್ಪಂದನೆ ಇಲ್ಲದಾಗಿದ್ದು ಆಗಾಲೇ ತಾನು ಆರೋಪಿಗಳಿಂದ ಮೋಸ ಹೋದ ಬಗ್ಗೆ ತಿಳಿದಿತ್ತು. ಅಷ್ಟರಲ್ಲಾಗಲೇ ಪತಂಜಲಿ ಆರ್ಯುವೇದದ ವ್ಯವಹಾರ ನೀಡದೆ ಅವರಿಂದ ಒಟ್ಟು ಮೊತ್ತ ರೂಪಾಯಿ 7,75,00,00 ಹಣವನ್ನು ಪಾವತಿ ಮಾಡಲಾಗಿದ್ದು ಮೋಸಹೋಗಿಬಿಟ್ಟಿದ್ದರು.

ಈ ಬಗ್ಗೆ ಮೋಸ ಹೋದ ಅನುರಾಧ ಹೊಳ್ಳ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Comments are closed.