ಕರಾವಳಿ

ಗಾಂಜಾ ಮಾರಾಟ: ಉಡುಪಿಯಲ್ಲಿ 1 ಕೆ.ಜಿ.ಗೂ ಅಧಿಕ ಗಾಂಜಾದೊಂದಿಗೆ ಆರೋಪಿ ಅಂದರ್

Pinterest LinkedIn Tumblr

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ಪೊಲೀಸರು ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ಉಡುಪಿ ಮಲ್ಲಾರು ನಿವಾಸಿ ಮೊಹಮ್ಮದ್ ಖಾಸಿಂ ಅಲಿಯಾಸ್ ಉಬೇದುಲ್ಲಾ (53) ಬಂಧಿತ ಆರೋಪಿ. ಆತನಿಂದ 1 ಕಿಲೋ 212 ಗ್ರಾಂ ಗಾಂಜಾ (ಮೌಲ್ಯ ರೂಪಾಯಿ. 45,000) , 1 ಮೊಬೈಲ್ ಫೋನ್, ಮೋಟಾರ್ ಸೈಕಲ್ ಮತ್ತು ಗಾಂಜಾ ಮಾರಾಟದ ರೂಪಾಯಿ. 4,000/- ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಸೆನ್‌ ಅಪರಾಧ ಪೊಲೀಸ್‌ ಠಾಣಾ ನಿರೀಕ್ಷಕರಾದ ಸೀತಾರಾಮ ಪಿ., ಎ.ಎಸ್.ಐ. ಕೇಶವ ಗೌಡ, ಸಿಬ್ಬಂದಿಯವರಾದ ಪ್ರಸನ್ನ ಸಾಲಿಯಾನ್, ರಾಘವೇಂದ್ರ, ಜೀವನ್ ಮತ್ತು ಡಿ.ಸಿ.ಐ.ಬಿ. ವಿಭಾಗದ ಸುರೇಶ್, ಶಿವಾನಂದ ಇದ್ದರು.

Comments are closed.