ಕರಾವಳಿ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ ಶುಭಾರಂಭವಾಗುವ ಮೂಲಕ ಪ್ರಧಾನಿ ಮೋದಿ ಕನಸು ನನಸು : ಸಚಿವ ಡಿ.ವಿ.ಎಸ್

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.02 ಭಾರತೀಯ ಅಂಚೆ ಕಚೇರಿಯಿಂದ ಆರಂಭಗೊಂಡ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಆರಂಭದೊಂದಿಗೆ ದೇಶದ ಆರ್ಥಿಕ ವ್ಯವಸ್ಥೆಗೆ ಕಟ್ಟಕಡೆಯ ವ್ಯಕ್ತಿಯನ್ನೂ ಸೇರಿಸುವ ಶತಮಾನದ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದ ಮೂಲಕ ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾದ ಕನಸು ನನಸಾಗುತ್ತಿದೆ ಎಂದು ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ದೇಶದಾದ್ಯಂತ ಭಾರತೀಯ ಅಂಚೆ ಕಚೇರಿಯಿಂದ ಆರಂಭಗೊಂಡ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಮಂಗಳೂರು ಶಾಖೆಗೆ ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಹೊಸ ಅಧ್ಯಾಯ ತೆರೆಯಬೇಕೆಂಬ ಮೋದಿ ಅವರ ಆಶಯಕ್ಕೆ ಪೂರಕವಾಗಿರುವ ಈ ಕಾರ್ಯಕ್ರಮದ ಮೂಲಕ 2018ರ ಡಿಸೆಂಬರ್‌ನೊಳಗೆ 1.55 ಲಕ್ಷ ಆಯಕ್ಸೆಸ್ ಪಾಯಿಂಟ್‌ಗಳಿಗೆ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಇಂದು ದೇಶದ 650 ಶಾಖೆಗಳು ಮತ್ತು 3,250 ಆಯಕ್ಸೆಸ್ ಪಾಯಿಂಟ್‌ಗಳು ಕಾರ್ಯಾರಂಭಗೊಂಡಿವೆ ಎಂದು ಸಚಿವ ಸದಾನಂದ ಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ರಾಜೇಂದ್ರ ಕುಮಾರ್, ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

Comments are closed.