ಪ್ರಮುಖ ವರದಿಗಳು

ವಿದೇಶದಲ್ಲಿ ಹಲವರ ಆತ್ಮಹತ್ಯೆಗೆ ಕಾರಣವಾಗಿರುವ ಅಪಾಯಕಾರಿ ಮೊಮೊ ಸೂಸೈಡ್ ಗೇಮ್’ಗೆ ವಿದ್ಯಾರ್ಥಿನಿ ಬಲಿ

Pinterest LinkedIn Tumblr

ಅಜ್ಮೀರ್(ರಾಜಸ್ತಾನ): ಅಪಾಯಕಾರಿ ಮೊಮೊ ಸೂಸೈಡ್ ಗೇಮ್ ನಿಂದಾಗಿ ವಿದೇಶದಲ್ಲಿ ಅದಾಗಲೇ ಹಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದ್ದು ಇದೀಗ ಭಾರತದಲ್ಲಿ ಹದಿನಾರು ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ.

ಹದಿನಾರು ವರ್ಷದ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣವನ್ನು ರಾಜಸ್ತಾನ ಪೊಲೀಸರು ತನಿಖೆ ನಡೆಸುತ್ತಿದ್ದು ಒಂದು ವೇಳೆ ಆಕೆ ಮೊಮೊ ಗೇಮ್ ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಸಾಬೀತಾದರೆ ಮೊಮೊ ಚಾಲೆಂಜ್ ಗೆ ಭಾರತದ ಮೊದಲ ಬಲಿ ಇದಾಗಲಿದೆ.

ರಾಜಸ್ತಾನದ ಅಜ್ಮೀರ್ ನಲ್ಲಿ ವಿದ್ಯಾರ್ಥಿನಿ ಮೊದಲಿಗೆ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯ ಸಹೋದರ ಆಕೆ ಮೊಮೊ ಗೇಮ್ ಆಡುತ್ತಿದ್ದಳು ಎಂದು ತಿಳಿಸಿದ್ದಾನೆ.

ಆಕೆ ಶಾಲೆಯ ಬಿಡುವಿನ ವೇಳೆ ಮತ್ತು ಊಟದ ವಿರಾಮದಲ್ಲಿ ಮೊಮೊ ಗೇಮ್ ಆಡುತ್ತಿದ್ದಳು ಎಂದು ಹೇಳಿದ್ದಾನೆ.

ಇನ್ನು ಆತ್ಮಹತ್ಯೆ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು ಆತ್ಮಹತ್ಯೆಗೆ ಕಡಿಮೆ ಗ್ರೇಡ್ಸ್ ಬಂದಿರುವುದು ಕಾರಣ ಇರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಆತ್ಮಹತ್ಯೆಗೆ ಮೊಮೊ ಚಾಲೆಂಜ್ ಕಾರಣವಾಗಿರಬಹುದೇ ಎಂಬುದನ್ನು ಪತ್ತೆಹಚ್ಚಲು ವಿದ್ಯಾರ್ಥಿನಿಯ ಇಂಟರ್ ನೆಟ್ ಬಳಕೆಯ ಹಿಸ್ಟರಿ ಹಾಗೂ ವೈಯಕ್ತಿಕ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.