ಅಂತರಾಷ್ಟ್ರೀಯ

ಈ ಕಪ್ಪೆಗಾಗಿ ವಧು ಅನ್ವೇಷಣೆಗೆ ಮುಂದಾದ ವಿಜ್ಞಾನಿಗಳು!

Pinterest LinkedIn Tumblr


ದಕ್ಷಿಣ ಅಮೆರಿಕ: ಬಲ್ಗೇರಿಯಾದಲ್ಲಿ ಸಂರಕ್ಷಣಾಕಾರರು ಅಳಿವಿನಂಚಿನಲ್ಲಿರುವ ಸೆಹೇಂಕಸ್ ಜಾತಿಗೆ ಸೇರಿರುವ ನೀರಿನ ಕಪ್ಪೆಗೆ ಹೆಣ್ಣು ಹುಡುಕುವಲ್ಲಿ ಬ್ಯುಸಿಯಾಗಿದ್ದು, ಇದೀಗ ಈ ಕಪ್ಪೆಗಾಗಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಕೂಡಾ ತೆರೆದಿದ್ದಾರೆ.

ಹೌದು! 10 ವರ್ಷ ರೋಮಿಯೋ ಎಂಬ ಗಂಡು ಕಪ್ಪೆಗೆ ವಿಶೇಷ ಸೆಹೇಂಕಸ್‌ ಎಂಬ ಪ್ರಭೇದಕ್ಕೆ ಸೇರಿದ್ದು, ಆದರೆ ಒಂಭತ್ತು ವರ್ಷದಿಂದ ಒಬ್ಬಂಟಿಯಾಗಿಯೇ ಬದುಕುತ್ತಿದೆ. ಹೀಗಾಗಿ ವಿಜ್ಞಾನಿಗಳು ಇದರ ಸಂಗಾತಿಗಾಗಿ ನದಿ ತೀರ, ಹಾಗೂ ಇತರೇ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದ್ದಾರೆ.

‘ನಾವು ರೋಮಿಯೋಗೆ ಸೂಕ್ತ ಸಂಗಾತಿಯನ್ನು ಹುಡುಕಲೇ ಬೇಕು. ಇಲ್ಲವಾದರೆ ಆತನ ಸಂತತಿಯೇ ಅಳಿಸಿ ಹೋಗುತ್ತದೆ. ಇದಕ್ಕಾಗಿ match.com ಎಂಬ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಮೂಲಕ ಸಂಗಾತಿಯ ಹುಡುಕುತ್ತಿದ್ದೇವೆ. ಈ ಜಾಹೀರಾತು ನೋಡುವ ಯಾರೇ ವಿಜ್ಞಾನಿಗಳು ರೋಮಿಯೋಗೆ ಹೆಣ್ಣು ಹುಡುಕಿದರೆ ಒಂದು ಪ್ರಭೇದವನ್ನು ಉಳಿಸಿದಂತಾಗುತ್ತದೆ’ ಎಂದು ವಿಜ್ಞಾನಿ ಆರ್ಟುರೋ ಮುನೋಝ್‌ ತಿಳಿಸಿದ್ದಾರೆ.

ಸೆಹೇಂಕಸ್ ಜಾತಿಗೆ ಸೇರಿರುವ ನೀರಿನ ಕಪ್ಪೆಗಳು ಕೇವಲ 15 ವರ್ಷ ಮಾತ್ರ ಜೀವಿತಾವಧಿ ಹೊಂದಿರುತ್ತವೆ. ಹೀಗಾಗಿ ರೋಮಿಯೋ ಹೆಚ್ಚೆಂದರೆ ಐದು ವರ್ಷ ಬದುಕಬಹುದು. ಒಂದು ವೇಳೆ ಈತನಿಗೆ ಹೆಣ್ಣು ಕಪ್ಪೆ ಸಿಗದೇ ಹೋದರೆ ಈ ಕಪ್ಪೆಯನ್ನು ಕೇವಲ ಪ್ರಾಣಿ ಸಂಗ್ರಹಾಲಯದಲ್ಲಿ ಮಾತ್ರ ಕಾಣಬಹುದು.

Comments are closed.