ಕರಾವಳಿ

‘ನೀರು ಕೊಡಿ’ ಎಂದು ಬೇಳೂರು ಗ್ರಾ.ಪಂ ಎದುರು ಕುಳಿತ ಕುಟುಂಬಗಳು: ಕಚೇರಿಗೆ ಬೀಗ ಹಾಕದೇ ತೆರಳಿದ ಸಿಬ್ಬಂದಿಗಳು!

Pinterest LinkedIn Tumblr

ಕುಂದಾಪುರ: ಕಳೆದ ಕೆಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟ ಜನರು ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಗ್ರಾಮ ಪಂಚಯತ್ ಎದುರು ಎರಡು ಕುಟುಂಬಗಳು ಪ್ರತಿಭಟನೆ ಮಾಡ್ತಾ ಇದ್ರೆ ಇತ್ತಾ ಗ್ರಾಮ ಪಂಚಯತ್ ಅಧಿಕಾರಿಗಳು ಗ್ರಾಮದ ಜನತರ ಸಮಸ್ಯೆ ಬಗೆ ಹರಿಸೋ ಬದಲು, ಪಂಚಾಯತಿಗೆ ಬೀಗವೂ ಹಾಕದೇ ಅವರ ಪಾಡಿಗೆ ಮನೆಗೆ ಹೋಗಿರುವಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.

ಬೇಳೂರು ಗ್ರಾಮ ಪಂಚಯತ್ ನ ಒಂದನೇ ವಾರ್ಡ್ ನಿವಾಸಿಗಳಾದ ಸದಾಶಿವ ಶೆಟ್ಟಿ ಹಾಗೂ ರಾಜೀವ ಎನ್ನುವವರು ತಮ್ಮ ತಮ್ಮ ಹೆಣ್ಣು ಮಕ್ಕಳೊಂದಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವಂತೆ, ನಿನ್ನೆ ಮಧ್ಯಾಹ್ನದ ಹೊತ್ತಿಗೆ ಮನವಿ ಸಲ್ಲಿಸಲು ಪಂಚಾಯತ್ ಗೆ ಬಂದಿದ್ದಾರೆ. ಆದರೆ ಸಿಬಂದಿಗಳು ಮನವಿಯನ್ನ ಸ್ವೀಕರಿಸದೇ ಇರುವ ಕಾರಣದಿಂದ ಇಬ್ಬರು ತಮ್ಮ ಹೆಣ್ಣು ಮಕ್ಕಳ ಜೊತೆ ಗ್ರಾಮ ಪಂಚಯತ್ ಎದುರುಗಡೆ ಧರಣಿ ಕೂತಿದ್ದರು.ಅದ್ರೆ ಗ್ರಾಮ ಪಂಚಯತ್ ಅಧಿಕಾರ ವರ್ಗವಾಗಲಿ ,ಅಲ್ಲಿನ ಸಿಬಂದಿಗಳಾಗಲೀ ಇವರ ಧರಣಿಗೆ ಸ್ಪಂದಿಸುವಂತಹ ಕೆಲಸವನ್ನು ಮಾಡುವುದರ ಬದಲು ,ಸಂಜೆ 5.30 ಹೊತ್ತಿಗೆ ಸಿಬಂದಿಗಳು ಕೆಲಸ ಮುಗಿಸಿ ಉರಿಯುತ್ತದ್ದ ಫ್ಯಾನ್, ಲೈಟ್ ಗಳನ್ನ ಹಾಗನೇ ಬಿಟ್ಟು,ಬಾಗಿಲು ಹಾಕದೇ ಹೊರಟು ಹೋಗಿದ್ದಾರೆ ಎನ್ನಲಾಗಿದೆ.

ಸುಮಾರು 7.30 ಗಂಟೆವರೆಗೆ ಇದೇ ಯಾರು ವಾಪಸ್ ಬಾರದೇ ಹೋದ ಸಂದರ್ಭದಲ್ಲಿ, ಅಲ್ಲಿನ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಧರಣಿ ಕುಳಿತ್ತಿದ್ದವರನ್ನ ಮನವೊಲಿಸಿ ಧರಣಿ ವಾಪಸ್ ಪಡೆಯುವಲ್ಲಿ ಯಶಸ್ವಯಾಗಿದ್ದಾರೆ. ನಂತರ ಗ್ರಾಮ ಪಂಚಾಯತ್ ಒಳಗೆ ತೆರಳಿ ಉರಿಯುತ್ತಿದ್ದ ಫ್ಯಾನ ಲೈಟ್ ಗಳನ್ನ ಅಫ್ ಮಾಡಿ ಪಂಚಾಯತ್ ಕಚೇರಿಗೆ ಬೀಗ ಹಾಕಿದ್ದಾರೆ. ಸಿಬಂದಿಗಳ ಈ ರೀತಿಯ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಷ ವ್ಯಕ್ತವಾಗಿದೆ.

ಬೇಳೂರು ಗ್ರಾಮ ಒಂದನೇ ವಾರ್ಡಿನಲ್ಲಿ ನೀರಿಗಾಗಿ ಸಾರ್ವಜನಿಕರು ಪರದಾಡ್ತಾ ಇದ್ದಾರೆ.ಕಳೆದ ಹಲವಾರು ಸಮಯಗಳಿಂದ ಕುಡಿಯುವ ನೀರನ್ನ ಪೂರೈಸುವಂತೆ ಗ್ರಾಮಸ್ಥರು ಪಂಚಯತ್ ಗೆ ಮನವಿ ಸಲ್ಲಿಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ. ನೀರಿನ ಮೀಟರನ್ನು ಗ್ರಾಮಸ್ಥರೇ ವ್ಯವಸ್ಥೆ ಮಾಡಿದ್ದಲ್ಲಿ ನಳ್ಳಿ ನೀರಿನ ಸಂಪರ್ಕ ಕೊಡಿಸುವುದಾಗಿ ಗ್ರಾಮ ಪಂಚಾಯತ್ ಈ ಹಿಂದೆ ಭರವಸೆ ನೀಡಿತ್ತು .ಹೀಗಾಗಿ ಗ್ರಾಮಸ್ಥರು ನೀರಿನ ಮೀಟರನ್ನು ಕೂಡ ಕೊಂಡುಕೊಂಡಿದ್ದರು ಆದ್ರೆ ಗ್ರಾಮ ಪಂಚಯತ್ ನೀರಿನ ವ್ಯವಸ್ಥೆಯನ್ನು ಇನ್ನೂ ಕೂಡ ಮಾಡದೆ ಇರುವುದರಿಂದ ದಲಿತ ರಾಜೀವ ಹಾಗೂ ಸದಾಶಿವ ಶೆಟ್ಟಿ ತಮ್ಮಿಬ್ಬರು ಮಕ್ಕಳೊಂದಿಗೆ ಮೀಟರು ಸಹಿತ ಗ್ರಾಮ ಪಂಚಾಯತಿಗೆ ಬಂದು ನಳ್ಳಿ ನೀರು ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಧರಣಿ ಕೂತುಕೊಂಡಿದ್ದರು

ಗ್ರಾಮಸ್ಥರಿಗೆ ಉತ್ತರ ನೀಡಿ ಸಮಸ್ಯೆ ಬಗೆ ಹರಿಸಬೇಕಾಗಿದ್ದ ಪಂಚಯತ್ ಪಿಡಿಓ ಹಾಗೂ ಸಿಬಂದಿಗಳು, ಕಚೇರಿಗೆ ಬೀಗ ಹಾಕದೇ ಹೋಗಿರುವುದಕ್ಕೆ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ತಾವು ಮಾಡಿದ್ದ ಕರ್ತವ್ಯ ಲೋಪವನ್ನು ಮರೆ ಮಾಡಲು ನಿನ್ನೆ ತಡ ರಾತ್ರಿ ಧರಣಿ ಕೂತಿದ್ದವರನ್ನ ಸೇರಿಸಿ ಧರಣಿಗೆ ಬೆಂಬಲ ಕೊಟ್ಟ ಐವರು ಗ್ರಾಮಸ್ಥರ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪಂಚಾಯತ್ ಅಧಿಕಾರಿಗಳು ದೂರು ನೀಡಿದ್ದು ಪಂಚಾಯತ್ ಆಡಳಿತದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತವಾಗಿದೆ.

Comments are closed.